ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ನಲ್ಲಿ ಭಾರತದ ಸಂವಿಧಾನ ಜಾಥಾ ಕಾರ್ಯಕ್ರಮ

0

ಭಾರತದ ಸಂವಿಧಾನ ಜಾಥವು ಫೆ.20ರಂದು ಅಪರಾಹ್ನ ಆಗಮಿಸಿತು. ಈ ಜಾಥವನ್ನು ಸ್ವಾಗತಿಸಿ, ಬೈಕ್ ರ್ಯಾಲಿಯೊಂದಿಗೆ ನಾರ್ಣಕಜೆ ಬಸ್ಸು ತಂಗುದಾನದ ವೃತ್ತದ ಬಳಿ ಬಂದು, ಪೂರ್ಣ ಕುಂಭ ಸ್ವಾಗತದೊಂದಿಗೆ ನಾರ್ಣಕಜೆ ಶಾಲೆ ಮಕ್ಕಳ ನಾಸಿಕ್ ಬ್ಯಾಂಡ್ ನ ಘೋಷ ದೊಂದಿಗೆ ಕಾಲು ನಡಿಗೆಯಲ್ಲಿ ಗ್ರಾಮ ಪಂಚಾಯತ್ ಆವರಣಕ್ಕೆ ಕರೆ ತರಲಾಯಿತು.
ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾರರ್ಪಣೆ ಮಾಡಲಾಯಿತು.


ಬಳಿಕ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಂದನಾ ಹೆಚ್. ಆರ್., ಗ್ರಾಮ ಪಂಚಾಯತ್ ಪಿಡಿಒ ಲೀಲಾವತಿ ಎಂ, ನೋಡಲ್ ಅಧಿಕಾರಿ ಅರಬ್ಬನ ಪೂಜಾರ್ ಮತ್ತು ನಾರ್ಣಕಜೆ ಶಾಲಾ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಎಂ ಆರ್ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಸಂವಿಧಾನದ ಬಗ್ಗೆ ಪ್ರಮಾಣ ವಚನ ಬೋಧಿಸಲಾಯಿತು. ನಂತರ ಸಂವಿಧಾನ ಜಾತದ ತಂಡದಿಂದ ಬೀದಿ ನಾಟಕ ನಡೆಸಲಾಯಿತು. ಕಾರ್ಯಕ್ರಮಕ್ಕೆ ಮೆರಗು ತುಂಬಲು ಮರ್ಕಂಜ ಯುವರಾಜ ಜೈನ ಇವರ ಕುದುರೆ ಆಗಮಿಸಿತು. ಕಾರ್ಯಕ್ರಮದ ನಿಮಿತ್ತ ನಾರ್ಣಕಜೆ ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ನಡೆಸಿ ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರುಗಳು, ಸದಸ್ಯರುಗಳು, ಗ್ರಾಮಸ್ಥರು, ಶಾಲಾ ಮಕ್ಕಳು ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಉಪಸ್ಥಿತರಿದ್ದರು. ಕೊನೆಯದಾಗಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಶೇ 25% ರ ನಿಧಿ ಯಡಿ ಪ. ಜಾತಿ ಮತ್ತು ಪ. ಪಂಗಡ ದ ಕೆಲವು ಫಲಾನುಭವಿಗಳಿಗೆ ಮತ್ತು ಶೇ 3% ರ ನಿಧಿ ಯಡಿ ಕೆಲ ವಿಕಲ ಚೇತನರಿಗೆ ನೀರಿನ ಟ್ಯಾಂಕಿ ಮತ್ತು ಚಯರ್ ಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ್ ಕುಮಾರ್ ವಿತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಂದನಾ ಎಚ್. ಆರ್., ಸದಸ್ಯರುಗಳಾದ ವೇಣುಗೋಪಾಲ ಪಿ ಜೆ ಪುಣ್ ಕುಟ್ಟಿ , ರಾಮಚಂದ್ರ ಪ್ರಭು ಕುಂಟಿಹಿತ್ಲು , ಶಿಲಾವತಿ ಬೊಳ್ಳಾಜೆ, ವೇಣುಗೋಪಾಲ ತುಂಬೆತಡ್ಕ ಮತ್ತು ಭಾಗೀರಥಿ ಎರ್ಮೆಟ್ಟಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಲೀಲಾವತಿ ಎಂ, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮತ್ತು ಫಲಾನುಭಾವಿಗಳು ಉಪಸ್ಥಿತರಿದ್ದರು.