ಆಲೆಟ್ಟಿ ಸದಾಶಿವ ದೇವಳಕ್ಕೆ ಶ್ರೀಪತಿ ಭಟ್ ರಿಂದ ತಾಮ್ರದ ಉರುಳಿ ಕೊಡುಗೆ

0

ಆಲೆಟ್ಟಿ ಶ್ರೀ ಸದಾಶಿವ ದೇವಳಕ್ಕೆ ಕೊಡುಗೆಯಾಗಿ ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಯವರು ತಾಮ್ರದ ಉರುಳಿಯನ್ನು ಸಮರ್ಪಿಸಿದರು.

ಈ ಸಂದರ್ಭದಲ್ಲಿ ಕುಂಟಾರು ಕ್ಷೇತ್ರದ ಶ್ರೀಧರ ತಂತ್ರಿಯವರು ಪ್ರಾರ್ಥಿಸಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಜೀ.ಸ.ಅಧ್ಯಕ್ಷ ಎನ್.ಎ.ರಾಮಚಂದ್ರ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಸದಸ್ಯ ಅಚ್ಚುತ ಮಣಿಯಾಣಿ ಆಲೆಟ್ಟಿ ಹಾಗೂ ಅರ್ಚಕ ಹರ್ಷಿತ್ ಬನ್ನಿಂತಾಯ ,ರಘುರಾಮ ಭಟ್ ಉಪಸ್ಥಿತರಿದ್ದರು.