ಫೆ .24 ಏನೆಕಲ್ ರೈತ ಯುವಕ ಮಂಡಲ ಕಟ್ಟಡ ಲೋಕಾರ್ಪಣೆ

0

ಏನೆಕಲ್ಲಿನ ರೈತ ಯುವಕ ಮಂಡಲದ ವತಿಯಿಂದ ಸುಮಾರು ಒಂದು ಕೋಟಿ 30 ಲಕ್ಷ ರೂ ವೆಚ್ಚದ ಭವ್ಯವಾದ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು ಅದರ ತಳ ಅಂತಸ್ತು ಸುಮಾರು 65 ಲಕ್ಷ ರೂ ವೆಚ್ಚದಲ್ಲಿ ಪೂರ್ಣಗೊಂಡಿದ್ದು ಫೆ. 24 ಲೋಕಾರ್ಪಣೆಗೊಳ್ಳಲಿರುವುದಾಗಿ ಕಟ್ಟಡ ರಚನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು ಸುಳ್ಯ ವಿಧಾನ ಸಭಾ ಶಾಸಕಿ ಭಾಗಿರಥಿ ಮುರುಳ್ಯ ಅವರು ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ . ಹಾಗೆ ರಂಗಮಂದಿರವನ್ನು ಕೃಷಿ ಇಲಾಖೆ ಕಾರ್ಯ ನಿರ್ವಹಣಾಧಿಕಾರಿ ಸುಹಾನ ಪಿ.ಕೆ ಮಾಡಲಿದ್ದಾರೆ. ದೀಪ ಪ್ರಜ್ವಲನೆಯನ್ನು ಸೀತಾರಾಮ ರೈ ಸವಣೂರು ,ವಾಣಿಜ್ಯ ಸಂಕೀರ್ಣವನ್ನು ರೊಟೇರಿಯನ್ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್ ಉದ್ಘಾಟಿಸಲಿದ್ದಾರೆ, ಎಂದವರು ತಿಳಿಸಿದರು. ಗ ಗಣ್ಯರು ಮುಖ್ಯ ಅತಿಥಿಗಳಾಗಿ ಹಾಗೂ ಗೌರವ ಉಪಸ್ಥಿತ ರಿರುವರು.

ಸಭಾ ಕಾರ್ಯಕ್ರಮ ಬಳಿಕ ಏನೆಕಲ್ಲು ಹಾಗೂ ಬಾನಡ್ಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅಮ್ಮ ಕಲಾವಿದರು ಕುಡ್ಲ ಇವರಿಂದ” ಅಮ್ಮ್ಮೆರ್ “ನಾಟಕ ಪ್ರದರ್ಶನ ನಡೆಯಲಿರುವುದಾಗಿ ತಿಳಿಸಿರುವರು. ಸುದ್ದಿಗೋಷ್ಠಿಯಲ್ಲಿ ಕಟ್ಟಡ ರಚನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಭರತ್ ನೇಕ್ರಾಜೆ, ಕಾರ್ಯದರ್ಶಿ ವಿಜಯಕುಮಾರ್, ಖಜಾಂಚಿ ನಾಗರಾಜ್ ಪರಮಲೆ, ಸದಸ್ಯರುಗಳಾದ ಪ್ರಶಾಂತ್ ಕೋಡಿಬೈಲು, ಶಿವಪ್ರಸಾದ್ ಮಾದನ ಮನೆ ,ಮೋಹನ ಗೌಡ ಕೋಟಿ ಗೌಡನ ಮನೆ, ಪ್ರಶಾಂತ್ ದೋಣಿ ಮನೆ, ಪುನೀತ್ ಕರ್ನಾಜೆ ಮುಂತಾದವರು ಉಪಸ್ಥಿತರಿದ್ದರು.