ಫೆ.28 : ಸುಳ್ಯದಲ್ಲಿ ವಿಕಲಚೇತನರ ಸಮನ್ವಯ ಸಭೆ ಹಾಗೂ ಮಾಹಿತಿ ಕಾರ್ಯಗಾರ

0

ಸುಳ್ಯ ಪಟ್ಟಣ ಪಂಚಾಯತ್ ವತಿಯಿಂದ ವಿಕಲಚೇತನರ ಸಮನ್ವಯ ಸಭೆ ಹಾಗೂ ಮಾಹಿತಿ ಕಾರ್ಯಗಾರ ಫೆ.28 ರಂದು ಬೆಳಗ್ಗೆ ಸುಳ್ಯದ ಪುರಭವನದಲ್ಲಿ ನಡೆಯಲಿದೆ. ಶಾಸಕಿ ಕು.ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಗರ ವಿಕಲಚೇತನರ ಮೇಲ್ವಿಚಾರಕ ಪ್ರವೀಣ್ ನಾಯಕ್ ವಿಕಲಚೇತನರ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಹಲವು ಗಣ್ಯರು ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಪೋಷಣಾ ಭತ್ಯೆ ವಿತರಣೆ , ಕಾರ್ಯಕರ್ತರ ಹಾಡು, ಮಿಮಿಕ್ರಿ ಸಮೂಹ ಗೀತೆ ಇತರ ಕಾರ್ಯಕ್ರಮಗಳು ನಡೆಯಲಿದೆ.