ನಾಳೆ ಸುಬ್ರಹ್ಮಣ್ಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಕಾರ್ಯಗಾರ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಡಾ| ಉರಾಳ್ಸ್ ವೆರಿಕೋಸ್ಸ್ ಕೇರ್ ಶೃಂಗೇರಿ ಯವರಿಂದ ಒಂದು ದಿನದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡುವ ಕಾರ್ಯಗಾರವು ಫೆ.23 ರಂದು ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9.00 ರಿಂದ ಸಂಜೆ 5.00 ತನಕ ನಡೆಯಲಿದೆ. ದೇವಳದ ಅರ್ಚಕರು, ದೈವ ನರ್ತಕರು, ದೇವಳದ ಸಿಬ್ಬಂದಿ ವರ್ಗದವರು, ಭದ್ರತಾ ಸಿಬ್ಬಂದಿಯವರು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘಟಕರು ತಿಳಿಸಿರುತ್ತಾರೆ.