ಇಂದು ಮಣಿಮಜಲು ಗರಡಿಯಲ್ಲಿ ಬ್ರಹ್ಮ ಬೈದದರುಗಳ ಮತ್ತು ಕೊಡಮಣಿತ್ತಾ ದೈವದ ನೇಮೋತ್ಸವ

0

ಕಳಂಜ‌ ಗ್ರಾಮದ ಮಣಿಮಜಲು ಗರಡಿಯಲ್ಲಿ ಬ್ರಹ್ಮ ಬೈದದರುಗಳ ಮತ್ತು ಕೊಡಮಣಿತ್ತಾ ದೈವದ ನೇಮೋತ್ಸವ ಇಂದು ನಡೆಯುತ್ತಿದೆ.

ಬೆಳಿಗ್ಗೆ 7 ನಾಗ ತಂಬಿಲ,‌ ತೋರಣ ಮುಹೂರ್ತ, ಕಲಶ ಶುದ್ಧಿ, ಮುಡಿಪು, ಬಳಿಕ ಕೊಡಮಣಿತ್ತಾಯ ದೈವಕ್ಕೆ ಗಗ್ಗರ‌ ಸೇವೆ, ನೇಮೋತ್ಸವ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಇಂದು ಸಂಜೆ ಗಂಟೆ 5 ರಿಂದ ಬೈದರುಗಳ ಭಂಡಾರ ತೆಗೆಯುವುದು, ಅನ್ನಸಂತರ್ಪಣೆ, ರಾತ್ರಿ 9 ಕ್ಕೆ ಬೈದರ್ಕಳರು ಗರಡಿ ಇಳಿಯುವುದು, ರಾತ್ರಿ 2 ಗಂಟೆಗೆ ಮಾನಿಬಾಲೆ ದೇವಿಯ ಉತ್ಸವ, ಬೆಳಿಗ್ಗೆ 4 ರಿಂದ ಬೈದರ್ಕಳ ದರ್ಶನ ನೇಮೋತ್ಸವ, ಪ್ರಸಾದ ವಿತರಣೆ ನಡೆಯಲಿದೆ.

ಫೆ. 23ರಂದು ಸಂಜೆ 6 ಗಂಟೆಯಿಂದ ಸುವರ್ಣ ಕುಟುಂಬಸ್ಥರ ತರವಾಡು ಮನೆಯ ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆ ಬಳಿಕ ನೇಮೋತ್ಸವ ಜರಗಲಿದೆ.