ಇಂದು ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದಲ್ಲಿ ಚಂಡಿಕಾ ಹೋಮ

0

ಬೆಳ್ಳಾರೆಯ ಗೌಡ ಸಾರಸ್ವತ ಬ್ರಾಹ್ಮಣರ 18 ಪೇಟೆ ದೇವಸ್ಥಾನಗಳಿಗೊಳಪಟ್ಟ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದಲ್ಲಿ 18 ನೇ ವರ್ಷದ ಚಂಡಿಕಾ ಹೋಮ ಇಂದು ನಡೆಯುತ್ತಿದೆ.
ಬೆಳಿಗ್ಗೆ ದೇವತಾ ಪ್ರಾರ್ಥನೆ, ಕಲಶ ಪ್ರತಿಷ್ಠೆ ನಡೆಯಿತು. ಮಧ್ಯಾಹ್ನ ಉಭಯ ದೇವರಿಗೆ ಮಹಾಪೂಜೆ, ಪೂರ್ಣಾಹುತಿ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8.00 ಗಂಟೆಯಿಂದ ಶ್ರೀ ವೆಂಕಟ್ರಮಣ ದೇವರ ಪಲ್ಲಕ್ಕಿ ಉತ್ಸವ ಸಹಿತ ಪೇಟೆ ಸವಾರಿ, ವಸಂತ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಲಿದೆ.