ಜ್ಯೋತಿಷಿ ಪಂಡಿತ್ ಶ್ಯಾಂಸುಂದರ್‌ರವರ 42 ನೇ ಹುಟ್ಟುಹಬ್ಬ ಹಿನ್ನಲೆ

0

ವಿಕಲಚೇತನ ಯುವಕನಿಗೆ ವೀಲ್‌ಚಯರ್, ಅನಾರೋಗ್ಯ ಪೀಡಿತ ಮಗುವಿಗೆ ಧನಸಹಾಯ ವಿತರಣೆ

ಸುಳ್ಯ ಗಾಂಧಿನಗರದ ಆರ್.ಕೆ. ಕಾಂಪ್ಲೆಕ್ಸ್‌ನಲ್ಲಿ ಸುಮಾರು 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೊಳ್ಳೆಗಾಲದ ಕಾಡುಕುರುಬ ಜನಾಂಗದ ಶ್ರೀದೇವಿ ಆರಾಧಕ ಜ್ಯೋತಿಷ್ಯರಾದ ಪಂಡಿತ್ ಶ್ಯಾಂಸುಂದರ್ (ಪಾಂಡುರಂಗ ಶಾಸ್ತ್ರಿ) ರವರ ೪೨ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ವಿಕಲ ಚೇತನ ಯುವಕನಿಗೆ ವೀಲ್‌ಚಯರ್, ಅನಾರೋಗ್ಯ ಪೀಡಿತ ಮಗುವಿಗೆ ಧನಸಹಾಯ ವಿತರಣೆ ಇಂದು ಫೆ. 25 ರಂದು ಸುದ್ದಿ ಸ್ಟುಡಿಯೋದಲ್ಲಿ ನಡೆಯಿತು.

ನೆಲ್ಲೂರು ಕೆಮ್ರಾಜೆ ಗ್ರಾಮದ ಲಕ್ಷ್ಮಣ ಮಣಿಯಾಣಿ ಮತ್ತು ಪ್ರೇಮಾ ದಂಪತಿಗಳ ಪುತ್ರ ಪ್ರಜ್ವಲ್ ಬೊಳ್ಳಾಜೆ ಹುಟ್ಟಿನಿಂದಲೇ ವಿಕಲಚೇತನರಾಗಿದ್ದು, ಅವರಿಗೆ ವೀಲ್ ಚೆಯರ್ ವಿತರಿಸಲಾಯಿತು. ಪ್ರಜ್ವಲ್ ಬೊಳ್ಳಾಜೆಯವರ ತಾಯಿ ಶ್ರೀಮತಿ ಪ್ರೇಮಾರವರು ಇದನ್ನು ಸ್ವೀಕರಿಸಿದರು.

ಚೆಂಬು ಗ್ರಾಮದ ಬಾಲೆಂಬಿ ಅಜಿತ್ ಹಾಗೂ ಅನುಪಮ ದಂಪತಿಗಳ ಪುತ್ರಿಯಾದ 4 ವರ್ಷದ ಕು. ಆರ್ವಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಇವರ ಚಿಕಿತ್ಸೆಗೆ ರೂ. 5೦೦೦ ವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜ್ಯೋತಿಷಿ ಪಂಡಿತ್ ಶ್ಯಾಂಸುಂದರ್, ಅವರ ಪುತ್ರಿ ಯೋಗಿತಾ, ಯಕ್ಷಗಾನ ಕಲಾವಿದ ಶೇಖರ ಮಣಿಯಾಣಿ, ಆರ್.ಕೆ.ಕಾಂಪ್ಲೆಕ್ಸ್ ಮಾಲಕ ರಾಮಕೃಷ್ಣ ರೈ, ವಿಜಯ ಆಲಡ್ಕ, ಭಾಸ್ಕರ ಸುಳ್ಯ, ಅರ್ಜುನ್, ಸುಂದರ ಅಂಬೆಕಲ್ಲು, ಸುದ್ದಿ ಬಿಡುಗಡೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್, ಸುದ್ದಿ ಬಳಗದ ಸದಸ್ಯರು ಉಪಸ್ಥಿತರಿದ್ದರು. ಸುದ್ದಿ ಕಚೇರಿಯ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಕಾರ್ಯಕ್ರಮ ನಿರೂಪಿಸಿದರು.