ಬಿಜೆಪಿ ಸುಳ್ಯ ಮಂಡಲ ಸಮಿತಿಯಿಂದ ವಿಕಸಿತ ಭಾರತ ಕಾರ್ಯಕರ್ತರ ಪ್ರ ಶಿಕ್ಷಣ ವರ್ಗ

0

ಬಿ.ಜೆ.ಪಿ. ಸುಳ್ಯ ಮಂಡಲ ಸಮಿತಿಯಿಂದ ವಿಕಸಿತ ಭಾರತ ಕಾರ್ಯಕರ್ತರ ಪ್ರಶಿಕ್ಷಣ ವರ್ಗ ಪೆರುವಾಜೆ ಜೆ.ಡಿ. ಅಡಿಟೋರಿಯಮ್ ನಲ್ಲಿ ಇಂದು ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಸಚಿವ ಯಸ್.ಅಂಗಾರ, ವಿಶ್ವೇಶ್ವರ ಭಟ್ ಬಂಗಾರಡ್ಕ , ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಅರ್ವಾರ, ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ಹರೀಶ್ ಕಂಜಿಪಿಲಿ, ವಿನಯ್ ಕಂದಡ್ಕ ಉಪಸ್ಥಿತರಿದ್ದರು. ಜಿಲ್ಲಾ ಪ್ರಶಿಕ್ಷಣ ಪ್ರಮುಖ್ ವಿಶ್ವೇಶ್ವರ ಭಟ್ ಬಂಗಾರಡ್ಕ ಪ್ರಶಿಕ್ಷಣ್ ನಡೆಸಿಕೊಟ್ಟರು.


ಮುಂದಿನ ದಿನಗಳಲ್ಲಿ ಪಕ್ಷ ಮತ್ತು ಸಂಘಟನೆ ಜನರ ಮಧ್ಯೆ ಸರ್ಕಾರದ ಯೋಜನೆ ತಲಪಿಸಬೇಕಾಗಿದ್ದು, ಇದರಲ್ಲಿ ಕಾರ್ಯಕರ್ತರ ಪಾತ್ರ ಮುಖ್ಯವೆಂದು ತಿಳಿಸಿದರು.

ಬಿಜೆಪಿ ಯ ಬೂತ್ ಮಟ್ಟದ ಆಯ್ದ ಕಾರ್ಯಕರ್ತರು ಈ ವರ್ಗದಲ್ಲಿ ಭಾಗಿಯಾಗಿದ್ದರು.