ಯೋಗ ಪಟು ಗೌರಿತಾಳಿಂದ ಮತ್ತೊಂದು ವಿಶ್ವ ದಾಖಲೆ

0

ಈಗಾಗಲೇ ಎರಡು ರಾಷ್ಟ್ರ ಹಾಗೂ ನಾಲ್ಕು ವಿಶ್ವ ದಾಖಲೆ ಮಾಡಿರುವ ಯೋಗ ಪಟು ಗೌರಿತಾ ಕೆ. ಜಿ ಇದೀಗ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಮತ್ತು ಕಿಂಗ್ಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾಳೆ.

11ನಿಮಿಷ 42ಸೆಕೆಂಡುಗಳ ಕಾಲ ಕೊಡಪಾನದ ಮೇಲೆ ಪರ್ವತಾಸನ ಮಾಡುವ ಮೂಲಕ ವಿಶ್ವ ದಾಖಲೆ ಮಾಡಿದ್ದಾಳೆ ಇದೊಂದು ವಿಶೇಷ ದಾಖಲೆಯಾಗಿದ್ದು ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ನ ಇತಿಹಾಸದಲ್ಲಿ ಇದು ಮೊತ್ತ ಮೊದಲ ದಾಖಲೆಯಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ದೀಪಕ್ ತವಾನಿ ಹೇಳಿದ್ದಾರೆ.

6ನಿಮಿಷ 23ಸೆಕೆಂಡುಗಳ ಕಾಲ ಹಣೆಯ ಮೇಲೆ ಉರಿಯುತ್ತಿರುವ ದೀಪವಿಟ್ಟು ಸ್ಟೂಲ್ ನ ಮೇಲೆ ಪೂರ್ಣ ಭುಜಂಗಾಸನ ಮಾಡುವ ಮೂಲಕ ಕಿಂಗ್ಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ವಿಶ್ವ ದಾಖಲೆ ಮಾಡಿದ್ದಾಳೆ.

ಕುಮಾರಸ್ವಾಮಿ ವಿದ್ಯಾಲಯದ ಮೂರನೇ ತರಗತಿ ವಿದ್ಯಾರ್ಥಿ ಯಾಗಿರುವ ಈಕೆ ಡಾ. ಗೌತಮ್ ಹಾಗೂ ಡಾ. ರಾಜೇಶ್ವರಿ ದಂಪತಿ ಪುತ್ರಿ