ನಾಪತ್ತೆಯಾದ ಯುವತಿ ಪ್ರಿಯಕರನೊಂದಿಗೆ ವಿವಾಹವಾಗಿ ಬೆಳ್ಳಾರೆ ಪೊಲೀಸ್ ಠಾಣೆಗೆ ಹಾಜರ್

0

ಅಲೆಕ್ಕಾಡಿ ಎಂಬಲ್ಲಿಂದ ಯುವತಿಯೋರ್ವಳು ಕೆಲದಿನಗಳ ಹಿಂದೆ ಕಾಣೆಯಾಗಿದ್ದು ಇದೀಗ ತನ್ನ ಪ್ರಿಯಕರನೊಂದಿಗೆ ವಿವಾಹವಾಗಿ ಠಾಣೆಗೆ ಹಾಜರಾಗಿರುವುದಾಗಿ ತಿಳಿದು ಬಂದಿದೆ.

ಯುವತಿ ಕಾಣೆಯಾದ ಬಗ್ಗೆ ಯುವತಿಯ ತಂದೆ ಮುರುಳ್ಯ ಗ್ರಾಮದ ಅಲೆಕ್ಕಾಡಿ ಸುಂದರ ಗೌಡ ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಯುವತಿ ತನ್ನ ಪ್ರಿಯಕರ ಹುಣಸೂರಿನ ಸುನಿಲ್‌ ಎಂಬಾತನ ಜೊತೆ ಹೋಗಿ ಹುಣಸೂರಿನ ನವಿಲೂರಮ್ಮ ದೇವಸ್ಥಾನದಲ್ಲಿ ವಿವಾಹವಾಗಿದ್ದು ಬಳಿಕ ಬೆಳ್ಳಾರೆ ಪೊಲೀಸ್ ಠಾಣೆಗೆ ಬಂದು ಹಾಜರಾಗಿ ಯುವತಿ ಗಂಡನ ಜೊತೆ ಮನೆಗೆ ತೆರಳಿರುವುದಾಗಿ ತಿಳಿದು ಬಂದಿದೆ.