ಮೇನಾಲದ ಮಣ್ಣಿನಲ್ಲಿ ವಯನಾಟ್ ಕುಲವನ್ ದೈವಂಕಟ್ಟು ‌ಮಹೋತ್ಸವ-ಸಂಭ್ರಮವ ಕಣ್ತುಂಬಿಕೊಳ್ಳಿ…

0

ಕು.ನಿರೀಕ್ಷಾ ಸುಲಾಯ

ಮೇನಾಲದ ಈ ಪುಣ್ಯ ‌ಭೂಮಿಯಲ್ಲಿ
ನಡೆಯಲಿದೆ ಒಂದು‌ ಅದ್ಭುತ..! ಭೂತಸ್ಥಾನದಲ್ಲಿ
ಹಲವಾರು ವರುಷಗಳ ಹಿಂದೆ ಆದು ಹೋದ ಘಟನೆ
ನನ್ನ‌ ಹುಟ್ಟು ಹಬ್ಬದ ಸಂದರ್ಭದಲ್ಲಿ ‌ಮೂಡಲಿದೆ ತಟ್ಟನೆ

ಭೈನಾಟಿ, ವಿಷ್ಣುಮೂರ್ತಿಗಳ‌ ಮಹಾ ಕೋಲ
ಮರೆಯಲು ಸಾಧ್ಯವೇ ಈ ಸುಂದರವಾದ ಕಾಲ
ವಿಸ್ತಾರವಾದ ‌ಜಾಗದಲ್ಲಿ‌ ನಡೆಯುವ ಭೂತಕೋಲ
ಮೇನಾಲದ ಚರಿತ್ರೆಯಲ್ಲಿ ಆಗುವುದು‌ ಮಹಾಕೋಲ

ಹಲವಾರು ದಿನಗಳ ಪರಿಶ್ರಮದಲ್ಲಿ ಮೂಡಿ ಬರುವ
ಸಹಸ್ರಾರು ಜನರ ಒಳ್ಳೆಯ ಕೆಲಸಗಳ ಪ್ರಭಾವ
ಊರಿನಾ ಜನರೆಲ್ಲ ಕೂಡಿ ಮಾಡುತ್ತಾ ಇರುವ
ಭೇದ-ಭಾವಗಳು ಇಲ್ಲದೆ ಮೂಡಿ ಬರುತ್ತಿರುವ

ಸಡಗರ ಸಂಭ್ರಮದಿಂದ ನಡೆಯುವ ಈ ಮಹಾಕಾರ್ಯ
ಎಲ್ಲರೂ ಕೆಲಸಗಳಲ್ಲಿ ತೋರಿಸುವರು ತಮ್ಮ ಶೌರ್ಯ
ಮನಸ್ಸಿನಿಂದ ಮೂಡುವ ಎಲ್ಲಾ ಕೆಲಸ ಕಾರ್ಯಗಳು
ತರುವುದು ಒಳ್ಳೆಯ ರೀತಿಯ ಫಲಗಳು

ವಯನಾಟ್ ಕುಲವನ್ ಕೋಲ ಎಂದರೇ ಸಾಧಾರಣವಲ್ಲ
ಒಂದು‌ ವರ್ಷದ ಅವಧಿಯ ದೊಡ್ಡ ಸಾಧನೆಯೇ
ಮೇನಾಲದ ನಾಮವು ಜಗದಗಲ ರಾರಾಜಿಸುತ್ತಾ
ಹೀಗೆಯೇ ಕೆಲಸ ಕಾರ್ಯಗಳು ಸಂಚರಿಸುತ್ತಾ

ನಮ್ಮ ತರವಾಡಿನ ಧರ್ಮ ದೈವ ಧೂಮಾವತಿ
ಸದಾ ರಕ್ಷಿಸುತ್ತಾ‌ ಬರುತ್ತಿರುವ ಕರುಣಾವತಿ
ಎಲ್ಲಾ ಕೆಲಸಗಳು ನಿರ್ವಿಘ್ನಗಳಿಂದ ನಡೆಯಲಿ
ನಡೆಯಲಿದೆ ಅತೀ ದೊಡ್ಡ ಮೇನಾಲದ ನಡಾವಳಿ

-ನಿರೀಕ್ಷಾ ಸುಲಾಯ ಯಂ
9ನೇ ತರಗತಿ
ರೋಟರಿ ವಿದ್ಯಾಸಂಸ್ಥೆಗಳು ಸುಳ್ಯ