ಸುಬ್ರಹ್ಮಣ್ಯ: ಕುಲ್ಕುಂದ ಒತ್ತೆಕೋಲ ಸಂಪನ್ನ

0

ಕುಲ್ಕುಂದ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ೫೫ನೇ ವರ್ಷದ ಒತ್ತೆಕೋಲ ಮಾ.2 ರಿಂದ ಮಾ.5 ರ ತನಕ ನಡೆಯಿತು.
ಮಾ.2 ರಂದು ಕೊರತಿಯಮ್ಮ ದೈವದ ನೇಮೋತ್ಸವವು ನಡೆಯಿತು.
ಆರಂಭದಲ್ಲಿ ಶ್ರೀ ದೈವದ ನರ್ತನ ಸೇವೆ ನೆರವೇರಿತು.ಬಳಿಕ ಪ್ರಸಾದ ವಿತರಣೆ ನಡೆಯಿತು.ನಂತರ ಅರಿಕೆ ಮತ್ತು ಕಾಣಿಕೆ ಸಮರ್ಪಣೆ ನೆರವೇರಿತು.ಬಳಿಕ ಅನ್ನಸಂರ್ಪಣೆ ನೆರವೇರಿತು. ಮಾ.3 ರ ಸಂಜೆ ಮೇಲೆರಿಗೆ ಅಗ್ನಿ ಸ್ಪರ್ಶ ನಡೆದು ರಾತ್ರಿ ಕುಳ್ಚಾಟ ದೈವದ ನಡಾವಳಿ ನಡೆಯಿತು. ಮಾ.4 ರ ಬೆಳಗ್ಗೆ ಶ್ರೀ ದೈವದ ಅಗ್ನಿಪ್ರವೇಶ,ಮಾರಿಕಳ, ಗಂಧಪ್ರಸಾದ ವಿತರಣೆ ನಡೆಯಿತು.ಬಳಿಕ ಗುಳಿಗ ದೈವದ ನಡಾವಳಿ ನಡೆಯಿತು.


ಈ ಸಂದರ್ಭ ದೈವಸ್ಥಾನ ಮುಖ್ಯ ಪೂಜಾರಿ ರಾಮಚಂದ್ರ ಮಣಿಯಾಣಿ, ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ವೆಂಕಟ್ರಾಜ್, ಗೌರವಾಧ್ಯಕ್ಷ ಎಂ.ಚಂದ್ರಹಾಸ ಭಟ್, ಕರ್ಯಾಧ್ಯಕ್ಷ ಹರೀಶ್ ಇಂಜಾಡಿ, ಕಾರ್ಯದರ್ಶಿ ರಾಜೇಶ್‌ಎನ್.ಎಸ್, ಕೋಶಾಧಿಕಾರಿ ರತ್ನಾಕರ.ಎಸ್, ಸದಸ್ಯರಾದ ಗೋಪಾಲ ಮಲೆ, ಕೃಷ್ಣ ಮಣಿಯಾಣಿ, ರಾಜೇಶ್ ಕಾಶಿಕಟ್ಟೆ, ಸುರೇಶ್ ಉಜಿರಡ್ಕ,ಸನತ್‌ಕುಮಾರ್.ಸಿ.ಭಟ್, ನವೀನ್ ಮಣಿ, ರವಿ ಕಕ್ಕೆಪದವು, ಮಹಾಬಲ ರೈ, ರಾಜೇಶ್ ಕುಲ್ಕುಂದ, ಜಯಪ್ರಕಾಶ್ ಜಾಡಿಮನೆ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.