ಕಾಮಗಾರಿ ನಡೆಯುತ್ತಿರುವ ಕಾರಣ ಮಣ್ಣು ಮಿಶ್ರಿತ ನೀರು : ನ.ಪಂ. ಸದಸ್ಯ ಧೀರಾ ಕ್ರಾಸ್ತ

0

ಸುಳ್ಯ ನಗರದ ದಕ್ಷಿಣ ಬೀರಮಂಗಲದ ಪರಿಸರದ ಕೆಲವು ಮನೆಗಳಲ್ಲಿ ನಗರ ಪಂಚಾಯತಿ ವತಿಯಿಂದ ಬರುತ್ತಿರುವ ನಲ್ಲಿ ನೀರು ಮಣ್ಣು ಮಿಶ್ರಿತವಾಗಿರುವ ಬಗ್ಗೆ ಸುದ್ದಿ ವೆಬ್ಸೈಟಿನಲ್ಲಿ ವರದಿ ಪ್ರಸಾರವಾಗಿತ್ತು.

ಇದಕ್ಕೆ ಸ್ಪಷ್ಟನೆಯನ್ನು ನೀಡಿರುವ ಸ್ಥಳೀಯ ನ.ಪಂ ಸದಸ್ಯ ಧೀರಾ ಕ್ರಾಸ್ತ ಈ ಪರಿಸರಕ್ಕೆ ಕುಡಿಯುವ ನೀರನ್ನು ಜ್ಯೋತಿ ವೃತ್ತದ ಬಳಿ ಇರುವ ಬೋರ್ವೆಲ್ನಿಂದ ನೀಡಲಾಗುತ್ತಿದ್ದು ಈ ನೀರಿನಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಇತ್ತೀಚಿಗೆ ಸುಳ್ಯದಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಿಂದ ನಲ್ಲಿಯಲ್ಲಿ ಮಣ್ಣು ಮಿಶ್ರಿತ ನೀರು ಬರುತ್ತಿದೆ. ಕಾರಣ ಹೊಸ ಪೈಪುಗಳನ್ನು ಅಳವಡಿಸುವ ಸಂದರ್ಭ ಅದಕ್ಕಾಗಿ ಗುಂಡಿ ತೋಡುವ ಸಂದರ್ಭ ನೀರಿನ ಹಳೆಯ ಪೈಪುಗಳು ಒಡೆದು ಹೋಗುತ್ತಿದ್ದು ಇದರ ಕೆಲಸ ನಿರ್ವಹಿಸುವವರು ಅಲ್ಲಿಂದಲ್ಲಿಗೆ ಪ್ಯಾಚ್ ವರ್ಕ್ ಮಾಡುತ್ತಿದ್ದು ಮರುಜೋಡಣೆ ಅಸಮರ್ಪಕವಾಗಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಉದ್ಭವಿಸಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಎಂದರೆ ಯಾರು ಕಾಮಗಾರಿ ನಡೆಯುವ ಸ್ಥಳಕ್ಕೆ ಬರುತ್ತಿಲ್ಲ. ಕೆಲಸ ನಿರ್ವಹಿಸುವವರು ಅವರಿಗೆ ಬೇಕಾದ ರೀತಿಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದು ಈ ಸಮಸ್ಯೆ ಕೇವಲ ನೀರು ಮಾತ್ರವಲ್ಲದೆ ರಸ್ತೆಗಳಿಗೂ ಕೂಡ ತೊಂದರೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.