ಪೆರಾಜೆ: ರಸ್ತೆ ಕಾಮಗಾರಿ ಅನುಷ್ಠಾನಕ್ಕೆ ಒತ್ತಾಯಿಸಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಕೆ

0

ಮಡಿಕೇರಿ ತಾಲೂಕಿನ ಪೆರಾಜೆಯಿಂದ ಆಲಟ್ಟಿ, ದೊಡ್ಡಡ್ಕ, ಕಾಪುಮಲೆ, ಕುಂದಲ್ಪಾಡಿ , ಕುಂಬಳಚೇರಿ ದಾರಿಯಾಗಿ ಪೆರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ತೆರಳುವ ನಬಾರ್ಡ್ ಯೋಜನೆಯ ರಸ್ತೆ ಕಾಮಗಾರಿಯನ್ನು ತಕ್ಷಣ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ, ಮುಂಬರುವ ಲೋಕಸಭಾ ಚುನಾವಣಾ ಬಹಿಷ್ಕರಿಸಿ ಪೆರಾಜೆ ಗ್ರಾ.ಪಂ. ಬಳಿ ಮಾ.8ರಂದು ಬ್ಯಾನರನ್ನು ಅಳವಡಿಸಲಾಗಿದೆ.

ನಬಾರ್ಡ್ ಯೋಜನೆಯ ವತಿಯಿಂದ ಅಂದಾಜು ನಾಲ್ಕು ಕೋಟಿ ರೂ. ಅನುದಾನದಲ್ಲಿ ಈ ರಸ್ತೆ ಕಾಮಗಾರಿ ನಡೆಯಲಿದ್ದು, ತಕ್ಷಣ ಈ ರಸ್ತೆ ಕಾಮಗಾರಿಯನ್ನು ಅನುಷ್ಠಾ‌ನಗೊಳಿಸುವಂತೆ ಒತ್ತಾಯಿಸಿ, ಈ ಬಾಗದ ನಾಗರಿಕರು ಬ್ಯಾನರ್ ಅಳವಡಿಸಿದ್ದಾರೆ.