














ಆಲೆಟ್ಟಿ ಕಲ್ಚೆರ್ಪೆಯ ಸಿರಿಕುರಲ್ ನಗರದಲ್ಲಿರುವ ವನದುರ್ಗಾ ಪರಿವಾರ ದೈವಗಳ ಸಾನಿಧ್ಯದ ಅಭಿವೃದ್ಧಿಗೆ ಸುಳ್ಯದ ವಿಷ್ಣುವರ್ಧನ್ ಅಭಿಮಾನಿಗಳ ಸಂಘದವರು ಸಾನಿಧ್ಯದ ಮುಂಭಾಗಕ್ಕೆ ಶಾಶ್ವತ ಚಪ್ಪರ ರಚನೆ ಮಾಡುವುದಕ್ಕೆ ರೂ. 30,000 ದೇಣಿಗೆಯಾಗಿ ನೀಡಿರುತ್ತಾರೆ. ಸಂಘದ ಅಧ್ಯಕ್ಷರಾದ ಹರಿಶ್ಚಂದ್ರ ಪಂಡಿತ್, ಸಂಚಾಲಕರಾದ ಅಬ್ದುಲ್ ಜಬ್ಬಾರ್, ಎಂ.ಕೆ.ಸತೀಶ್ , ರಾಜು ಪಂಡಿತ್, ಮಾಜಿ ತಾ.ಪಂ.ಸದಸ್ಯ ತೀರ್ಥರಾಮ ಬಾಳಕಜೆ, ದೀಪಕ್ ವಿಷ್ಣು ಸರ್ಕಲ್, ಟ್ರಸ್ಟಿನ ಅಧ್ಯಕ್ಷರಾದ ಗೋಕುಲ್ ದಾಸ್, ಸಂಚಾಲಕರಾದ ಅಶೋಕ್ ಪೀಚೆಮನೆ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕಲ್ಚಾರ್, ನಿರ್ದೇಶಕರಾದ ಬಾಲಚಂದ್ರ, ರಾಮ ನಾಯಕ್ ಉಪಸ್ಥಿತರಿದ್ದರು.









