ಬೆಳ್ಳಾರೆ ಜ್ಞಾನದೀಪದಲ್ಲಿ ನವೋದಯ ಬೇಸಿಗೆ ತರಬೇತಿ ಶಿಬಿರ ಸಮಾರೋಪ

0

2024-25ನೇ ಸಾಲಿನಲ್ಲಿ ನವೋದಯ ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬೇಸಿಗೆ ರಜಾ ಅವಧಿಯ ಒಂದು ತಿಂಗಳ ನವೋದಯ ತರಬೇತಿ ಶಿಬಿರ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆಯಿತು. ಏಪ್ರಿಲ್ 15ರಿಂದ ಮೇ.15ರವರೆಗೆ ನಡೆದ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ತರಗತಿಗಳನ್ನು ನಡೆಸಲಾಯಿತು. ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಾವು ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯ ಗಣಿತ ಶಿಕ್ಷಕ ಪ್ರದೀಪ್ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು. ಶಿಕ್ಷಕಿ ಗೀತಾ ಬಾಲಚಂದ್ರ ಉಪಸ್ಥಿತರಿದ್ದರು. ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಕಾರ್ಯಕ್ರಮ ನಿರ್ವಹಿಸಿದರು.