ಇಂದು ಬಳ್ಳಕ್ಕದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

0

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಯಕ್ಷಗಾನ ಬಯಲಾಟ ಶ್ರೀದೇವಿ‌ಮಹಾತ್ಮೆ ಇಂದು (ಮೇ. 17ರಂದು) ಸಂಜೆ ಸ.ಕಿ.ಪ್ರಾ. ಶಾಲೆ ಹರಿಪುರ ಬಳ್ಳಕ್ಕದಲ್ಲಿ ಸಂಜೆ 5.30ರಿಂದ ನಡೆಯಲಿದೆ.
ರಾತ್ರಿ 8.00 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾದಿಗಳು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ದೇವಿ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ್ ಮೂಲ್ಯ ವಗ್ಗ, ಮುಂಬಯಿ ಉದ್ಯಮಿ ಶ್ರೀಧರ ಮೂಲ್ಯ, ಮಂಗಳೂರಿನ ಎಸ್.ಜೆ.ಆರ್ ಟೆಕ್ನಾಲಜಿ ಮಾಲಕರಾದ ಸುಂದರ ಬಳ್ಳಕ್ಕ, ವೆಂಕಟ್ರಮಣ ಬಳ್ಳಕ್ಕ, ಚಂದ್ರಶೇಖರ ಬಳ್ಳಕ್ಕ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು, ಸ.ಕಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ. ಮತ್ತು ಊರವರು ಆಮಂತ್ರಿಸಿದ್ದಾರೆ.