ಅರಂತೋಡು : ಕೊಡಂಕೇರಿ ಮನೆಗೆ ಮರ ಬಿದ್ದು ಹಾನಿ

0

ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿ ಸಂಭವಿಸಿದ ಘಟನೆ ಅರಂತೋಡು ಗ್ರಾಮದ ಕೊಡಂಕೇರಿಯಲ್ಲಿ ಮೇ.17ರಂದು ಬೆಳಿಗ್ಗೆ ಸಂಭವಿಸಿದೆ.

ಕೊಡಂಕೇರಿ ನಿವಾಸಿ ಮಹಮ್ಮದ್ ಎಂಬವರ ಮನೆಯ ಹಿಂಬದಿಯಲ್ಲಿದ್ದ ಮರ ಮನೆಯ ಮೇಲೆ ಮುರಿದು ಬಿದ್ದ ಪರಿಣಾಮವಾಗಿ ಮನೆಯ ಅಡುಗೆ ಕೋಣೆಗೆ ಹಾನಿಯಾಗಿದ್ದು, ಮರ ಮುರಿದು ಬಿದ್ದ ರಭಸಕ್ಕೆ ಮನೆಯ ಸಿಮೆಂಟ್ ಶಿಟ್ ಮತ್ತು ಹಂಚುಗಳಿಗೂ ಹಾನಿ ಸಂಭವಿಸಿದ್ದು, ಸುಮಾರು ಒಂದುವರೆ ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.


ಮರ ಬೀಳುವ ಸಂದರ್ಭದಲ್ಲಿ ಅಡುಗೆ ಕೋಣೆಯಲ್ಲಿ ಯಾರೂ ಇಲ್ಲದ ಕಾರಣ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.