ಪಂಜ: ತರಬೇತಿ ಪಡೆದ ವಿದ್ಯಾರ್ಥಿಗಳಿಂದ ಭಜನಾ ಸಂಕೀರ್ತನೆ ಆರಂಭ
🔶 ಪ್ರತಿ ತಿಂಗಳ ಮೂರನೇ ಶುಕ್ರವಾರ ವಿದ್ಯಾರ್ಥಿಗಳಿಂದ ಭಜನೆ

0

ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಜರುಗಿದ 15 ವರುಷದ ಭಜನಾ ತರಬೇತಿಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಪ್ರತಿ ತಿಂಗಳ ಮೂರನೇ ಶುಕ್ರವಾರ ಪಂಜ ಶಾರದಾಂಬಾ ಭಜನಾ ಮಂದಿರದಲ್ಲಿ ಭಜನಾ ಸಂಕೀರ್ತನೆ ನಡೆಸುವುದಾಗಿ ಸಂಕಲ್ಪ ಮಾಡಿದ್ದು ,ಆ ಪ್ರಯುಕ್ತ ಮೇ.17 ರಂದು ಭಜನಾ ಸಂಕೀರ್ತನೆಗೆ ದೀಪ ಪ್ರಜ್ವಲನೆ ನಡೆಯಿತು.

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ರವರು ದೀಪ ಪ್ರಜ್ವಲನೆ ಗೊಳಿಸಿದರು.

ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಪಲ್ಲೋಡಿ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಪಲ್ಲೋಡಿ, ಭಜನೋತ್ಸವ ಸಮಿತಿ ನಿಕಟಪೂರ್ವಾಧ್ಯಕ್ಷ ಕುಸುಮಾಧರ ಕೆಮ್ಮೂರು, ಭಜನಾ ತರಬೇತುದಾರ ಆನಂದ ಬೋಗಾಯನಕೆರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಧನ್ಯ ಮೊದಲಾದವರು ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಭಜನಾ ಮಂಡಳಿ ಪೂರ್ವಾಧ್ಯಕ್ಷ ಮಹಾಲಿಂಗ ಸಂಪ ಪ್ರಾರ್ಥಿಸಿದರು. ಭಜನಾ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್ ತೋಟ ಸ್ವಾಗತಿಸಿದರು ಮತ್ತು ನಿರೂಪಿಸಿದರು.