ಸಂಪಾಜೆ ಗ್ರಾಮದ ಕಡಪಾಲದಲ್ಲಿ ನಾಯಿ ಅಡ್ಡ ಬಂದು ಆಕ್ಟಿವಾ ಸ್ಕಿಡ್ ಸವಾರನಿಗೆ ಗಾಯ

0

ನಾಯಿ ಅಡ್ಡಬಂದ ಪರಿಣಾಮವಾಗಿ ಆಕ್ಟಿವಾ ಸ್ಕಿಡ್ ಆಗಿ ಬಿದ್ದು , ಸವಾರ ಗಾಯಗೊಂಡ ಘಟನೆ ದ‌.ಕ. ಸಂಪಾಜೆ ಗ್ರಾಮದ ಕಡಪಾಲದಲ್ಲಿ ಮೇ.24ರಂದು ಬೆಳಿಗ್ಗೆ ಸಂಭವಿಸಿದೆ.

ಚೆಂಬು ಗ್ರಾಮದ ಯುವಕನೋರ್ವ ಸಂಪಾಜೆ ಮಾರ್ಗವಾಗಿ ಸುಳ್ಯಕ್ಕೆ ಆಕ್ಟಿವಾ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕಡಪಾಲದಲ್ಲಿ ನಾಯಿ ಅಡ್ಡಬಂದ ಪರಿಣಾಮವಾಗಿ ಆಕ್ಟಿವಾ ಸ್ಕಿಡ್ ಆಗಿ ಪಲ್ಟಿಯಾಗಿದ್ದು, ಯುವಕನ ತಲೆ ಹಾಗೂ ಕೈ -ಕಾಲುಗಳಿಗೆ ಗಾಯವಾಗಿದ್ದು, ಅವರನ್ನು ಸ್ಥಳೀಯರು ಸೇರಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕರೆದೊಯ್ದಿರುವುದಾಗಿ ತಿಳಿದುಬಂದಿದೆ.