ಮುರುಳ್ಯ ಗ್ರಾಮದ ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರೀ ಭದ್ರಕಾಳಿ ದೇವಸ್ಥಾನದಲ್ಲಿ 2ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವವು ಇಂಸು ವೇದಮೂರ್ತಿ ಎನ್. ಕೇಶವ ತಂತ್ರಿಗಳು ಮೂಡಬಿದ್ರೆ
ಇವರ ನೇತೃತ್ವದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
















ಜೂ.11ರಂದು ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ,ಸಂಜೆ ವಾಸ್ತು, ರಾಕ್ಷೋಘ್ನ, ನವಗ್ರಹ ಹೋಮ, ವಾಸ್ತುಬಲಿ, ದಿಗ್ಬಲಿ ನಡೆಯಿತು.

ಇಂದು ಬೆಳಿಗ್ಗೆ ಗುರುಗಣಪತಿ ಪೂಜೆ, ಪುಣ್ಯಾಹವಾಚನ, ಗಣಪತಿ ಹೋಮ, ನಾಗ ಅಭಿಷೇಕ, ದೇವರಿಗೆ ನವಕ ಕಲಾಹೋಮ ಕಲಶಾಭಿಷೇಕ ಪ್ರಸನ್ನ ಪೂಜೆ ದೇವರ ಪ್ರೀತ್ಯರ್ಥವಾಗಿ ಭದ್ರಕಾಳಿ ಹೋಮ ,ಬಳಿಕ ಪೂರ್ಣಾಹುತಿ ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ, ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.









