ಸುಳ್ಯ ಕೊಡಿಯಾಲಬೈಲು ಎಂ.ಜಿ.ಎಂ. ಶಾಲೆಯಲ್ಲಿ 2024-25 ನೇ ಸಾಲಿನ ಪೋಷಕರ ಸಭೆಯು ಜುಲೈ 9ರಂದು ನಡೆಯಿತು.















ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕರಾದ ದೊಡ್ಡಣ್ಣ ಬರೆಮೇಲು ಮಾತನಾಡಿ, ಶೈಕ್ಷಣಿಕ ವಿಚಾರಗಳನ್ನು ಸವಿಸ್ತಾರವಾಗಿ ಪೋಷಕರಿಗೆ ತಿಳಿಸಿದರು.

ಸಭೆಯಲ್ಲಿ ನೂತನ ವರ್ಷದ ಷೋಷಕರ ಸಂಘವನ್ನು ರಚನೆ ಮಾಡಲಾಯಿತು. ನೂತನ ಪೋಷಕರ ಸಂಘದ ಅಧ್ಯಕ್ಷರಾಗಿ ಹರಿಪ್ರಸಾದ್ ಪಾನತ್ತಿಲ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಶ್ವೇತಾ ಆಯ್ಕೆಯಾದರು. ಸಮಿತಿಗೆ ಇಪ್ಪಾತ್ತಾರು ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

2023-24 ನೇ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ಶ್ರೀಮತಿ ಪೂಜಾ ಭಟ್ ರವರು ಮಾತನಾಡಿ ನಮ್ಮ ಸಂಸ್ಥೆಗೆ ಜನರೇಟರ್ ಕೊಡುಗೆಯಾಗಿ ನೀಡುವ ಭರವಸೆಯನ್ನು ನೀಡುವುದರೊಂದಿಗೆ , ಪೋಷಕರಾದ ಮೋಹನ್, ಶ್ರೀಮತಿ ಶಾರದಾ ಹಾಗೂ ಶ್ರೀಮತಿ ಜಯಲಕ್ಷ್ಮಿ ಯವರು ಶಾಲೆಗೆ ಫ್ಯಾನ್ ಗಳನ್ನು ಕೊಡುಗೆಯಗಿ ನೀಡುವಂತೆ ಪ್ರೋತ್ಸಾಹ ನೀಡುವಲ್ಲಿ ಸಹಕಾರಿಯಾದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮೀ, ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಚಿತ್ರಲೇಖಾ, ಶ್ರೀಮತಿ ಶ್ರುತಿ ರೈ ಹಾಗೂ ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಮೀ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಅನಿತಾ ವಂದಿಸಿದರು. ಸಹ ಶಿಕ್ಷಕಿ ಶ್ರೀಮತಿ ಪರಿಮಳಾ ಕಾರ್ಯಕ್ರಮ ನಿರೂಪಿಸಿದರು.









