ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ಬಿನ 2024 -25 ನೇ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.13ರಂದು ಸುಬ್ರಹ್ಮಣ್ಯ ದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪದಗ್ರಹಣ ಅಧಿಕಾರಿ ಪುತ್ತೂರು ಇನ್ನ ವೀಲ್ ಕಬ್ಬಿನ ಸೀಮಾ ನಾಗರಾಜ ಅವರು ನೂತನ ಅಧ್ಯಕ್ಷೆ ಶ್ರುತಿ ಮಂಜುನಾಥ್ ಹಾಗೂ ಪದಾಧಿಕಾರಿಗಳಿಗೆ ಪದ ಪ್ರಧಾನ ಮಾಡಿ ಮಾತನಾಡುತ್ತಾ” ನಮ್ಮ ಸಮಾಜದಲ್ಲಿ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಸಂತೋಷದ ವಿಚಾರ. ನಾವು ನಮ್ಮ ಮನೆಯಲ್ಲಿ ಹೇಗೆ ನಮ್ಮ ಜವಾಬ್ದಾರಿಯನ್ನ ಸಮರ್ಥವಾಗಿ ನಿರ್ವಹಿಸುತ್ತೇವೆ, ಅದೇ ರೀತಿ ಸಂಘ ಸಂಸ್ಥೆಗಳಲ್ಲಿ ಕೂಡ ಸಮಾಜಮುಖಿ ಕಾರ್ಯಕ್ರಮಗಳನ್ನ ಯಶಸ್ವಿಯಾಗಿ ಮಾಡಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಸರಕಾರದಿಂದ ಮಹಿಳೆಯರಿಗಾಗಿ ಅದೆಷ್ಟೋ ಸವಲತ್ತುಗಳು ಬಿಡುಗಡೆಯಾಗುತ್ತಿದೆ ,ಆದರೆ ಅದರ ಪ್ರಯೋಜನ ಅಥವಾ ಮಾಹಿತಿ ಸರಿಯಾಗಿ ಇಲ್ಲದಿರುವುದರಿಂದ ನೀವುಗಳು ಸಾರ್ವಜನಿಕರಿಗೆ ಯೋಜನೆಗಳನ್ನು ಮುಟ್ಟಿಸುವ ಕೆಲಸವನ್ನು ಮಾಡಿ, ಅಲ್ಲದೆ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ನಿಮ್ಮಿಂದಾದಷ್ಟು ಸಹಾಯವನ್ನು ಮಾಡಿ ಎಂದು ನುಡಿದರು.”
















ಸಮಾರಂಭದ ಅಧ್ಯಕ್ಷತೆಯನ್ನು ಇನ್ನರ್ ವೀಲ್ ಅಧ್ಯಕ್ಷ ವೇದ ಶಿವರಾಂ ವಹಿಸಿ ಎಲ್ಲರನ್ನ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸವಣೂರು ವಿದ್ಯಾ ಸಂಸ್ಥೆಯ ಸಂಚಾಲಕರಾದ ಸೀತಾರಾಮ ರೈ ಅವರು ಮಾತನಾಡುತ್ತಾ “ಸುಬ್ರಹ್ಮಣ್ಯದಲ್ಲಿ ಇನ್ನರ್ ವೀಲ್ ಕ್ಲಬ್ ತನ್ನದೇ ಆದ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿ ಸಮಾಜದಲ್ಲಿ ಗುರುತಿಸಿಕೊಂಡಿದೆ. ತಾವುಗಳು ತಮ್ಮ ಕ್ಲಬ್ಬಿಗೆ ಇನ್ನಷ್ಟು ಮಹಿಳೆಯರನ್ನು ಸೇರಿಸಿ ಸಮಾಜ ಸೇವೆಯಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿ. ಮುಂದಿನ ಅಧ್ಯಕ್ಷೆ ಶ್ರುತಿ ಮಂಜುನಾಥ್ ಅವರು ಎಲ್ಲರನ್ನು ಒಗ್ಗೂಡಿಸಿಕೊಂಡು ಇನ್ನಷ್ಟು ಹೆಚ್ಚು ಕೆಲಸ ಕಾರ್ಯಗಳನ್ನು ಮಾಡಿ ಎಂದು ನುಡಿದರು. ಇನ್ನೋರ್ವ ಅತಿಥಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ್ ನಾಯರ್ ಮಾತನಾಡಿ ಇನ್ನರ್ವೇಲ್ ಕ್ಲಬ್ ತನ್ನದೇ ಆದ ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಮುನ್ನಡೆಯಲಿ, ನಮ್ಮ ಕ್ಲಬ್ ವತಿಯಿಂದ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ವೈದ್ಯಕೀಯ ಸೇವೆಯಲ್ಲಿ ಕಾಯಕ ರತ್ನ ದೊಂದಿಗೆ ಹಲವು ಪ್ರಶಸ್ತಿಗಳನ್ನ ಪಡೆದ ಡಾ. ತ್ರಿಮೂರ್ತಿ ಅವರನ್ನ ಗೌರವಿಸಲಾಯಿತು. ಅನಾರೋಗ್ಯದಿಂದ ಬಳಲುತ್ತಿದ್ದ ಏನೇಕಲ್ಲಿನ ಅಶ್ವಿನಿ ಅವರಿಗೆ ಧನಸಹಾಯ ನೀಡಲಾಯಿತು.
ವೇದಿಕೆಯಲ್ಲಿ ಖಜಾಂಜಿ ಶೋಭಾ ಗಿರಿಧರ್, ಐ ಎಸ್ ಓ. ವಿಮಲಾ ರಂಗಯ್ಯ ,ನಿಕಟ ಪೂರ್ವ ಅಧ್ಯಕ್ಷೆ ಸರೋಜಾ ಮಾಯಿಲಪ್ಪ, ಕಾರ್ಯದರ್ಶಿ ಹಾಗೂ ನೂತನ ಅಧ್ಯಕ್ಷ ಶೃತಿ ಮಂಜುನಾಥ್, ನೂತನ ಖಜಾಂಜಿ ಸುನಿತಾ ನವೀನ್, ಬುಲೆಟಿನ್ ಸಂಪಾದಕಿ ಭಾರತಿ ದಿನೇಶ್, ಐ ಎಸ್ ಓ ಶ್ರೀಜಾ ಚಂದ್ರಶೇಖರ್, ನೂತನ ಕಾರ್ಯದರ್ಶಿ ಚಂದ್ರ ಹೊನ್ನಪ್ಪ ಉಪಸ್ಥಿತರಿದ್ದರು. ಸರೋಜಾ ಮೈಲಪ್ಪ ಪ್ರಾರ್ಥನೆಗೈದರು. ಸುನೀತಾ ನವೀನ್ ಇನ್ನರ್ವೆಲ್ ಪ್ರಾರ್ಥನೆ ವಾಚಿಸಿದರು .ಇನ್ನರ್ ವೀಲ್ ಪೂರ್ವ ಅಧ್ಯಕ್ಷೆ ಲೀಲಾ ವಿಶ್ವನಾಥ್ ನಿರೂಪಿಸಿ, ಚಂದ್ರ ಹೊನ್ನಪ್ಪ ಧನ್ಯವಾದ ಸಮರ್ಪಿಸಿದರು.









