ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಒಂದು ದಿನದ ತಾಂಬೂಲ ಪ್ರಶ್ನೆಯು ಇಂದು ನಡೆಯಿತು. ದೇವಳದ ಅಭಿವೃದ್ಧಿ ಕಾರ್ಯ ಮತ್ತು ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಕ್ಷೇತ್ರದಲ್ಲಿ ಜ್ಯೋತಿಷ್ಯರಾದ ಶ್ರೀಧರನ್ ಪೆರುಂಬಾಳ ಕಾಸರಗೋಡು ಪ್ರಶ್ನಾ ಚಿಂತನೆ ನಡೆಸಿದರು.
















ಈ ಸಂದರ್ಭದಲ್ಲಿ ಕ್ಷೇತ್ರದ ತಂತ್ರಿ ಗಳಾದ ಕೆಮ್ಮಿಂಜೆ ಬ್ರಹ್ಮ ಶ್ರೀ ನಾಗೇಶ್ ತಂತ್ರಿಗಳು, ವೇದ ಮೂರ್ತಿ ಪ್ರಶಾಂತ್ ಪರ್ಲತ್ತಾಯ, ಪ್ರಧಾನ ಅರ್ಚಕರಾದ ಶ್ರೀ ಹರಿ ಕುಂಜೂರಾಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡು ಬೈಲ್ ಮತ್ತು ಸದಸ್ಯರಾದ ವೆಂಕಪ್ಪ ಗೌಡ ಆಲಾಜೆ, ಶ್ರೀಮತಿ ಭಾಗ್ಯಪ್ರಸನ್ನ , ಶ್ರೀಮತಿ ವಾರಿಜಾಕ್ಷಿ , ರೂಪರಾಜ ರೈ ಕೆ, ನಾಗೇಶ್ ಆಳ್ವ ಕಟ್ಟಬೀಡು , ಯೋಗಾನಂದ ಉಳ್ಳಲಾಡಿ, ರಘು ನಾಥ್ ಎಂಜೀರ್, ಮಾಜಿ ಸದಸ್ಯ ನವೀನ್ ಕುಮಾರ್ ಬೋಳ್ಕಜೆ, ಸೇವಾ ಸಮಿತಿ ಅಧ್ಯಕ್ಷ ಶಿವಾನಂದ ನಾಗ ಮಜಲ್, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಗುಣವತಿ ನಾವೂರು, ಉತ್ಸವ ಸಮಿತಿ ಸದಸ್ಯರು, ಭಜನಾ ಮಂಡಳಿ ಸದಸ್ಯರು , ಕಲಾ ಸಂಘ ಸದಸ್ಯರು ಅಲ್ಲದೆ ಶ್ರೀಮತಿ ಲೀಲಾವತಿ ಮಿಲ್ಕ್ ಮಾಸ್ಟರ್, ದಿನಕರ ಗೌಡ ಬೊಳ್ಕಜೆ, ಸುಂದರ್ ಗೌಡ ಆರೆಂಬಿ, ರ್ಕೇರ್ಪಡ ಕೂಡು ಕಟ್ಟು, ಕರಿಂಬಿಲ, ಬೋಳ್ಕಜೆಯ ಭಕ್ತಾದಿಗಳು ಉಪಸ್ಥಿತರಿದ್ದರು.









