ಜಯನಗರ ವಿಕ್ರಮ ಯುವಕ ಮಂಡಲದ ಬಳಿ ಸುಂದರ ನಾಯ್ಕ ಎಂಬುವರ ಮನೆಯ ಮುಂಭಾಗದ ಸೀಟಿನ ಮೇಲೆ ಪಕ್ಕದಲ್ಲಿದ್ದ ಬಾದಾಮಿ ಮರದ ಗೆಲ್ಲು ಮುರಿದುಬಿದ್ದು ಸೀಟುಗಳಿಗೆ ಹಾನಿಯಾಗಿದೆ.
















ಜು 17 ರಂದು ಸಂಜೆ ಸುರಿದ ಬಾರಿ ಗಾಳಿ ಮಳೆಗೆ ಮರದ ಗೆಲ್ಲು ಮುರಿದು ಬಿದ್ದಿದ್ದು ಘಟನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಮರದ ಗೆಲ್ಲನ್ನು ಮನೆಯವರು ತೆರವುಗೊಳಿಸಿದ್ದು ಸುಮಾರು ಮೂರಕ್ಕೂ ಹೆಚ್ಚು ಸೀಟುಗಳಿಗೆ ಹಾನಿಯಾಗಿದೆ.









