Home ನಿಧನ ಅಡ್ಕಾರು ಮೋಹಿಯುದ್ದಿನ್ ಜುಮಾ ಮಸೀದಿ ಮಾಜಿ ಅಧ್ಯಕ್ಷ ಇಬ್ರಾಹಿಂ ಕತ್ತಾರ್ ಅಡ್ಕಾರು ನಿಧನ

ಅಡ್ಕಾರು ಮೋಹಿಯುದ್ದಿನ್ ಜುಮಾ ಮಸೀದಿ ಮಾಜಿ ಅಧ್ಯಕ್ಷ ಇಬ್ರಾಹಿಂ ಕತ್ತಾರ್ ಅಡ್ಕಾರು ನಿಧನ

0

ಮೋಹಿಯುದ್ದಿನ್ ಜುಮಾ ಮಸೀದಿ
ಅಡ್ಕಾರು – ಜಾಲ್ಸುರು ಇದರ ಮಾಜಿ ಅಧ್ಯಕ್ಷ, ಇಬ್ರಾಹಿಂ ಕತ್ತಾರ್ ಅಡ್ಕಾರು ರವರು ಅಲ್ಪ ಕಾಲದ ಅಸೌಖ್ಯದಿಂದ ಜು.17 ರಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ ಅಂದಾಜು 72 ವರ್ಷ ವಯಸ್ಸಾಗಿತ್ತು.

ಜಾಲ್ಸುರು ಪಯಸ್ವಿನಿ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷರಾಗಿಯೂ ಆಗಿರುವ ಇವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮೃತದೇಹ ಬೆಂಗಳೂರು ಆಸ್ಪತ್ರೆಯಲ್ಲಿ ಇದ್ದು, ಸಂಜೆ ಮೂರು ಗಂಟೆಗೆ ಅಡ್ಕಾರು ಅವರ ನಿವಾಸಕ್ಕೆ ಬರಲಿದೆ. ಬಳಿಕ 5 ಗಂಟೆಗೆ ಅಂತಿಮ ವಿಧಿ ವಿಧಾನ ಕಾರ್ಯಕ್ರಮಗಳು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

NO COMMENTS

error: Content is protected !!
Breaking