ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ , ವಿಶ್ವವಿದ್ಯಾನಿಲಯದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ
ಪುತ್ತೂರು : ಗ್ರಾಮೀಣ ಪ್ರದೇಶದ ಯುವ ಜನತೆಗೆ ಆಶಾಕಿರಣವಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ವಿವಿಧ ಅರ್ಹತಾ ಪರೀಕ್ಷೆಗಳಿಗೆ ತರಬೇತಿ ಪಡೆದ ಇರ್ವರು ವಿದ್ಯಾರ್ಥಿಗಳು ಕೂಡ ಉತ್ತೀರ್ಣರಾಗುವ ಮೂಲಕ ಅಕಾಡೆಮಿ ಹೊಸ ಮೈಲುಗಲ್ಲನ್ನು ಮೂಡಿಸಿದೆ.
ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ-CTET2024 ವರ್ಷ ಮೊಳೆಯರ್ ಸಾಧನೆ :















ವಿವಿಧ ಅರ್ಹತಾ ಪರೀಕ್ಷೆಗಳಿಗೆ ಸಂಬಂದಿಸಿದಂತೆ ವಿದ್ಯಾಮಾತಾ ಅಕಾಡೆಮಿಯು ನೀಡಿದ್ದ ತರಗತಿಗಳಿಗೆ ಹಾಜರಾಗಿದ್ದ ವರ್ಷ ಮೊಳೆಯರ್ ರವರು ಉತ್ತಮ ಶ್ರೇಣಿಯಲ್ಲಿ 2024ನೇ ಸಾಲಿನ CTET ನಲ್ಲಿ ಉತ್ತೀರ್ಣರಾಗುವ ಮೂಲಕ ಕೇಂದ್ರೀಯ ವಿದ್ಯಾಲಯಗಳ ನೇಮಕಾತಿಯ ಲಿಖಿತ ಪರೀಕ್ಷೆಗಳನ್ನು ಎದುರಿಸಲು ಅರ್ಹತೆ ಪಡೆದುಕೊಂಡಿದ್ದಾರೆ.
ಇವರು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದು ಈಗಾಗಲೇ ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ(KARTET)ಯಲ್ಲಿ ಉತ್ತೀರ್ಣರಾಗಿದ್ದರು.
ವರ್ಷ ಮೊಳೆಯರ್ ಪ್ರಸ್ತುತ ಅಂಬಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಸಂತ ಫಿಲೋಮೀನಾ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ವಿಜಯಕುಮಾರ್ ಮೊಳೆಯರ್ ಹಾಗೂ ಉಷಾ ಎಂ ರವರ ಪುತ್ರಿ.
ವಿಶ್ವವಿದ್ಯಾನಿಲಯದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಸೃಷ್ಟಿ ಪಿ ಎಸ್ ಸಾಧನೆ…
ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ನಡೆಸಲಾಗುವ ಸಾಮಾನ್ಯ ಅರ್ಹತಾ ಪರೀಕ್ಷೆಗಳಿಗೆ ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದ ಕುಕ್ಕೆ ಸುಬ್ರಹ್ಮಣ್ಯ ಇಲ್ಲಿನ ನೂಚಿಲ ನಿವಾಸಿ ಪ್ರಮೋದ್ ಮತ್ತು ಶೋಭಾ ದಂಪತಿ ಪುತ್ರಿ ಕು. ಸೃಷ್ಟಿ ಪಿ ಎಸ್ ರವರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಅವಳಿ ಸಾಧನೆಗೆ ಹರ್ಷ ವ್ಯಕ್ತಪಡಿಸಿದ ವಿದ್ಯಾಮಾತಾ ಅಕಾಡೆಮಿ
ಇಬ್ಬರು ವಿದ್ಯಾರ್ಥಿನಿಯರ ಸಾಧನೆ ಪೋಷಕರ ಹಾಗೂ ಸಂಸ್ಥೆಯ ಹಿರಿಮೆಯನ್ನು ಉನ್ನತ ಸ್ಥಾನಕ್ಕೆರಿಸಿದ್ದು ,
ಇವರ ಅವಿರತ ಶ್ರಮಕ್ಕೆ ಅಕಾಡೆಮಿಯ ಆಡಳಿತ ಮಂಡಳಿ, ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.









