
ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪ್ರಧಾನ ಕಛೇರಿಯಲ್ಲಿ ಸ್ಚಾತಂತ್ರೋತ್ಸವವನ್ನು ಆ.15ರಂದು ಆಚರಿಸಲಾಯಿತು.















ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ ಅವರು ಧ್ವಜಾರೋಹಣ ನೆರವೇರಿಸಿ, ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿ, ಉಪಾಧ್ಯಕ್ಷ ಕರುಣಾಕರ ರೈ ಕುಕ್ಕಂದೂರು, ನಿರ್ದೇಶಕರುಗಳಾದ ಶ್ರೀಕೃಷ್ಣ ಭಟ್ ನೆಡಿಲು, ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಗಣೇಶ್ ಅಂಬಾಡಿಮೂಲೆ, ಸುಖೇಶ್ ಅಡ್ಕಾರು, ಶ್ರೀಮತಿ ಪ್ರೇಮಲತಾ ಪಲ್ಲತ್ತಡ್ಕ, ಶ್ರೀಮತಿ ಸಾವಿತ್ರಿ ಕಾರಿಂಜ, ಶ್ರೀಮತಿ ಭಾರತಿ ಪಿ.ಕೆ. ಕಜೆಗದ್ದೆ, ಶೇಷಪ್ಪ ನಾಯ್ಕ ಕಜೆಗದ್ದೆ, ಸೀತಾರಾಮ ಮಠ, ಮಹೇಶ್ವರ ಕಾರಿಂಜ , ಮಾಜಿ ಅಧ್ಯಕ್ಷರುಗಳಾದ ವಸಂತ ಗಬ್ಬಲಡ್ಕ, ಹೇಮಚಂದ್ರ ಕದಿಕಡ್ಕ, ಜಯರಾಮ ರೈ ಜಾಲ್ಸೂರು, ನೇತ್ರಕುಮಾರ ಪೇರೋಳಿ, ಮಾಜಿ ಉಪಾಧ್ಯಕ್ಷ ಮಾದವ ಗೌಡ ಕಾಳಮನೆ, ಮಾಜಿ ನಿರ್ದೇಶಕ ದಿವಾಕರ ಕಾಳಪ್ಪಜ್ಜನಮನೆ, ಸಂಘದ ಆಂತರಿಕ ಲೆಕ್ಕ ಪರಿಶೋಧಕರಾದ ಕುಶಾಲಪ್ಪ ಗೌಡ ಕಣಜಾಲು ಸೇರಿದಂತೆ ಸಹಕಾರಿ ಸಂಘದ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.









