














ತರ್ಬಿಯತುಲ್ ಇಸ್ಲಾಮ್ ಎಸೋಸಿಯೇಷನ್ ಜೀರ್ಮುಕ್ಕಿ ಇದರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವವು ಜೀರ್ಮುಕ್ಕಿ ಮಸೀದಿ ವಠಾರದಲ್ಲಿ ನಡೆಯಿತು .ನಿವೃತ್ತ ಎಎಸ್ಐ ಕೃಷ್ಣಯ್ಯ ಧ್ವಜಾರೋಹಣ ನೆರವೇರಿಸಿದರು. ಜೀರ್ಮುಕ್ಕಿ ಮಸೀದಿ ಇಮಾಮ್ ಅಶ್ರಫ್ ಜೌಹರಿ ಕುಂಬಕ್ಕೋಡು ದುಆ ಮತ್ತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೀರ್ಮುಕ್ಕಿ ಮಸೀದಿ ಅಧ್ಯಕ್ಷ ಜಿ ಎಸ್ ಅಬ್ದುಲ್ಲ, ಎಲಿಮಲೆ ಮಸೀದಿ ಪ್ರಧಾನ ಕಾರ್ಯದರ್ಶಿ ಜಿ ಎಚ್ ಇಬ್ರಾಹಿಮ್, ತರ್ಬಿಯತ್ ಕಾರ್ಯದರ್ಶಿ ಫೈಸಲ್ ಜೀರ್ಮುಕ್ಕಿ , ನುಸ್ರತ್ ಕಾರ್ಯದರ್ಶಿ ಅಶ್ರಫ್ ಜಿ ಎ ಕೆ ಮತ್ತಿತರರು ಉಪಸ್ಥಿತರಿದ್ದರು









