ಸುಳ್ಯ ಕಸಬಾ ಗ್ರಾಮದ ದುಗ್ಗಲಡ್ಕ ನಿವಾಸಿ ಸಿರಿಲ್ ಡಿ.ಸೋಜಾರವರು ಇಂದು ರಾತ್ರಿ ನಿಧನರಾದರು.ಅವರಿಗೆ 62 ವರ್ಷ ವಯಸ್ಸಾಗಿತ್ತು.















ಹೃದಯ ಸಂಬಂಧಿ ಕಾಯಿಲೆಯಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದರು.ನಿನ್ನೆ ರಾತ್ರಿ ಅಸ್ವಸ್ಥರಾದ ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ನಿಧನರಾದರೆಂದು ತಿಳಿದುಬಂದಿದೆ.ಸುಮಾರು 30ವರ್ಷಗಳಿಂದ ಚರ್ಚ್ ನ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಹಲವಾರು ಸಾಮಾಜಿಕ ಸಂಘಟನೆಯಲ್ಲಿಯೂ ದುಡಿದಿದ್ದರು. ದುಗ್ಗಲಡ್ಕ ಕುರಲ್ ತುಳುಕೂಟದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದರು.ಮೃತರು ಪತ್ನಿ ಪೌಲಿನ್,ಪುತ್ರಿ ಸ್ಮಿತಾಪ್ರಿಯಾ, ಸಹೋದರರು, ಸಹೋದರಿಯರು, ಹಾಗೂ ಬಂಧುಗಳನ್ನು ಅಗಲಿದ್ದಾರೆ.ಮೃತರ ಅಂತಿಮ ಕಾರ್ಯ ಇಂದು ಸಂಜೆ ಸುಳ್ಯ ಸಂತ ಬ್ರಿಜಿಡ್ ಚರ್ಚ್ ನಲ್ಲಿ ನಡೆಯಲಿದೆ.









