ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ (ರಿ) ಪಂಜ ಇದರ ವತಿಯಿಂದ ದೀಪಾವಳಿ ಪ್ರಯುಕ್ತ ಅ.31 ರಂದು ಮಧ್ಯಾಹ್ನ ಗಂಟೆ 2.30 ರಿಂದ ಪಂಜ ದೇವಸ್ಥಾನದ ಬಳಿ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಕೇಂದ್ರದಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.















ಪ್ರಸಂಗ’ಅಹಲ್ಯೋದ್ಧರಣ-ಪರಶುರಾಮ ಗರ್ವಭಂಗ ‘ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಶಾಂತ್ ರೈ ಪಲ್ಲೋಡಿ, ಚೆಂಡೆ-ಮದ್ದಳೆ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ, ಶ್ರೀಧರ ವಿಟ್ಲ, ಗಗನ್ ಪಂಜ, ಮುಮ್ಮೇಳದಲ್ಲಿ ಜಬ್ಬಾರ್ ಸಮೋ ಸಂಪಾಜೆ, ಸತ್ಯಶಂಕರ ಮಲೆಯಾಳ, ಪ್ರಸಾದ್ ಸವಣೂರು,ವೆಂಕಟೇಶ ಕುಮಾರ್ ಬಾಯಾರ ಪಾಲ್ಗೊಳ್ಳಲಿದ್ದಾರೆ.










