ಹರಿಹರಪಲ್ಲತ್ತಡ್ಕ : ಅಮ್ರತ ಸ್ತ್ರೀ ಶಕ್ತಿ ಗೊಂಚಲು ಮಹಾಸಭೆ

0

ಹರಿಹರಪಲ್ಲತ್ತಡ್ಕ ಅಮ್ರತ ಸ್ತ್ರೀ ಶಕ್ತಿ ಗೊಂಚಲು ಇದರ ಮಹಾ ಸಭೆ ಇತ್ತೀಚೆಗೆ ಹರಿಹರೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಶ್ರೀಮತಿ ಲತಾ ಹಿಮ್ಮತ್ ಕಿರಿಭಾಗ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ತಾರಮಲ್ಲಾರ, ಹರಿಹರಪಲ್ಲತ್ತಡ್ಕ ಗ್ರಾ.ಪಂ ಅಧ್ಯಕ್ಷರಾದ ವಿಜಯ ಅಂಙಣ, ಹರಿಹರೇಶ್ವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು, ಸಾಹಿತಿಗಳಾದ ಶ್ರೀಮತಿ ಲಲಿತಾಜ ಮಲ್ಲಾರ, ಕೊಲ್ಲಮೊಗ್ರ ವಲಯ ಮೇಲ್ವಿಚಾರಕಿರಾದ ಶ್ರೀಮತಿ ಉಷಾ ರೈ, ಕೆನರಾ ಬ್ಯಾಂಕ್ ಆಪ್ತ ಸಮಾಲೋಚಕರಾದ ಶ್ರೀಮತಿ ಸುಜಾತ, ಗೊಂಚಲಿನ ಕಾರ್ಯದರ್ಶಿಯಾದ ಶ್ರೀಮತಿ ಅಮೀತಾ ಕಿರಿಭಾಗ, ಗ್ರಾ. ಪಂ. ಸದಸ್ಯೆ ಶಿಲ್ಪಾ ಕೊತ್ನಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ತ್ರೀ ಶಕ್ತಿ ಗೊಂಚಲು ಸದಸ್ಯರು ಉಪಸ್ಥಿತರಿದ್ದರು .

ಕೊಲ್ಲಮೊಗ್ರ ವಲಯ ಮೇಲ್ವಿಚಾರಕಿರಾದ ಶ್ರೀಮತಿ ಉಷಾ ರೈ ಪ್ರಾಸ್ತಾವಿಕ ಮಾತನಾಡಿದರು ಸಾಹಿತಿಗಳಾದ ಶ್ರೀಮತಿ ಲಲಿತಾಜ ಮಲ್ಲಾರ ರವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ನಂತರ ಶ್ರೀಮತಿ ತಾರಾ ಮಲ್ಲಾರ ರವರು ಅಮ್ರತ ಸ್ತ್ರೀ ಶಕ್ತಿ ಗೊಂಚಲು ಗುಂಪಿಗೆ ಸಹಾಯಧನ ನೀಡಿದರು, ಕೆನರಾ ಬ್ಯಾಂಕ್ ಆಪ್ತ ಸಮಾಲೋಚಕರಾದ ಶ್ರೀಮತಿ ಸುಜಾತ ರವರು ಬ್ಯಾಂಕ್ ಬಗ್ಗೆ ಮಾಹಿತಿ ನೀಡಿದರು ನಂತರ ಸ್ತ್ರೀ ಶಕ್ತಿ ಎಲ್ಲಾ ಸದಸ್ಯರಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು . ಸಭೆಯಲ್ಲಿ
ನೂತನ ಸಮಿತಿಯ ರಚನೆ ಮಾಡಲಾಯಿತು . ಅಧ್ಯಕ್ಷರಾಗಿ ನಿರ್ಮಲಾ ಕಟ್ಟೆಮನೆ ಉಪಾಧ್ಯಕ್ಷರಾಗಿ ಹೇಮಾವತಿ, ಐನೆಕಿದು ಕಾರ್ಯದರ್ಶಿ ಶ್ರೀಮತಿ ನವ್ಯಾ ಕೊತ್ನಡ್ಕ , ಖಜಾಂಜಿಯಾಗಿ ಶ್ರೀಮತಿ ಶೋಭಾ ಮಣಿಯವರನ್ನು ಆಯ್ಕೆ ಮಾಡಲಾಯಿತು. ಶ್ರೀಮತಿ ನಿರ್ಮಲಾರವರು ಪ್ರಾರ್ಥಿಸಿ, ಚಂದ್ರಿಕಾ ರವರು ಸ್ವಾಗತಿಸಿ ಹೇಮಾವತಿರವರು ವಂದಿಸಿದರು. ಶ್ರೀಮತಿ ಹರ್ಷಿಣಿಯವರು ಕಾರ್ಯಕ್ರಮ ನಿರೂಪಿಸಿದರು .