ಅಧುನಿಕ ಸುಳ್ಯದ ನಿರ್ಮಾತೃ, ಶಿಕ್ಷಣ ಬ್ರಹ್ಮ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಸಂಸ್ಥಾಪಕ ಡಾ. ಕುರುಂಜಿ ವೆಂಕಟ್ರಮಣ ಗೌಡರ 96ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಡಾ. ಕುರುಂಜಿ ಪುತ್ಥಳಿಗೆ ಡಾ. ಚಿದಾನಂದ ಕೆ.ವಿ ಮತ್ತು ಗಣ್ಯರು ಡಿ. 26ರಂದು ಹಾರಾರ್ಪಣೆ ಮಾಡಿದರು.
















ಹಾರಾರ್ಪಣೆಯ ಬಳಿಕ ಮಾತನಾಡಿದ ಡಾ. ಕೆ.ವಿ. ಚಿದಾನಂದರವರು ಡಾ. ಕೆವಿಜಿಯವರು ಶಿಕ್ಷಣ, ಆರೋಗ್ಯಕ್ಕೆ ನೀಡಿದ ಮಹತ್ವದಿಂದಾಗಿ ಕೆವಿಜಿ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಯಿತು. ಸಂಸ್ಥೆಯ ಏಳಿಗೆಗಾಗಿ ಎಲ್ಲಾ ಸಿಬ್ಬಂದಿಗಳು ನಿಷ್ಠೆಯಿಂದ ಕೆಲಸ ಮಾಡಿದರೆ ಅದುವೆ ಡಾ. ಕೆವಿಜಿಯವರಿಗೆ ನೀಡುವ ನಿಜವಾದ ಗೌರವ. ಸುಳ್ಯಕ್ಕೆ ಶಿಕ್ಷಣ ಸಂಸ್ಥೆ ಗೇಗೆ ಮುಖ್ಯವೋ ಧಾರ್ಮಿಕ ಕೇಂದ್ರವೂ ಅಷ್ಟೇ ಮುಖ್ಯ. ಸುಳ್ಯದ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸೋಣ ಎಂದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಉಪಾಧ್ಯಕ್ಷೆ ಶ್ರೀಮತಿ ಶೋಭ ಚಿದಾನಂದ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ, ಕಾರ್ಯದರ್ಶಿ ಕೆ.ವಿ. ಹೇಮನಾಥ್, ಡಾ. ಐಶ್ವರ್ಯ ಕೆ.ಸಿ, ಕೋಶಾಧಿಕಾರಿ ಡಾ. ಗೌತಮ್ ಗೌಡ ಎ.ಜಿ, ಸದಸ್ಯರಾದ ಜಗದೀಶ್ ಅಡ್ತಲೆ ಧನಂಜಯ ಮದುವೆಗದ್ದೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುಳ್ಯ ತಹಶಿಲ್ದಾರ್ ಮಂಜುಳಾ, ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ, ಮುಖ್ಯಾಧಿಕಾರಿ ಸುಧಾಕರ್, ಕಂದಾಯ ನಿರೀಕ್ಷಿಕರಾದ ಅವಿನ್ ರಂಗತ್ತಮಲೆ, ಸುಳ್ಯ ಹಬ್ಬ ಸಮಿತಿ ಸ್ಥಾಪಕಾಧ್ಯಕ್ಷ ಜಯಪ್ರಕಾಶ್ ರೈ, ಜನತಾ ಗ್ರೂಪ್ ನ ಮುಸ್ತಫಾ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ವಲಯ ಅರಣ್ಯಾಧಿಕಾರಿ ಮಂಜುನಾಥ್, ಕೆವಿಜಿ ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಡಾ. ಜ್ಞಾನೇಶ್ ಎನ್.ಎ, ನ್ಯಾಯವಾದಿ ವೆಂಕಪ್ಪ ಗೌಡ ಮತ್ತು ಗೋಕುಲ್ ದಾಸ್ ಡಾ. ಕುರುಂಜಿಯವರಿಗೆ ನುಡಿನಮನ ಸಲ್ಲಿಸಿದರು.
ನೆಹರು ಮೆಮೋರಿಯಲ್ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ಮಿಥಾಲಿ ರೈ ಸ್ವಾಗತಿಸಿ, ಸ್ಥಾಪಕರ ದಿನಾಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಲೀಲಾಧರ್ ವಂದಿಸಿದರು. ಉಪನ್ಯಾಸಕಿ ಕು. ಬೇಬಿ ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ಸುಳ್ಯ, ರೋಟರಿ ಕ್ಲಬ್ ಸುಳ್ಯ, ರೋಟರ್ಯಾಕ್ಟ್ ಕ್ಲಬ್ ಸುಳ್ಯ, ಜೇಸಿಐ ಸುಳ್ಯ ಸೇರಿದಂತೆ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು, ಕೆವಿಜಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಸಿಬ್ಬಂದಿಗಳು, ಕೆವಿಜಿ ಯವರ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಕೆವಿಜಿ ಯವರ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.









