ಐವರ್ನಾಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸೀನಿಯರ್ ಎಸೋಸಿಯೇಟ್ ಜಯರಾಮ ನಾಯಕ್ ನಿವೃತ್ತಿ – ಸಾರ್ವಜನಿಕ ಸನ್ಮಾನ ಹಾಗೂ ಬೀಳ್ಕೊಡುಗೆ

0

ಐವರ್ನಾಡು ಎಸ್.ಬಿ.ಐ.ಬ್ಯಾಂಕಿನ ಸೀನಿಯರ್ ಎಸೋಸಿಯೇಟ್ ಆಗಿ ಕರ್ತವ್ಯ ನಿರ್ವಹಿಸಿ ಡಿ.,31 ರಂದು ಸೇವಾ ನಿವೃತ್ತಿ ಹೊಂದಿದ ಜಯರಾಮ ನಾಯಕ್ ರವರು ಡಿ.31 ರಂದು ಸೇವಾ ನಿವೃತ್ತಿ ಹೊಂದಿದ್ದು ಅವರಿಗೆ ಸಾರ್ವಜನಿಕ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವು ಪಂಚಾಯತ್ ಗ್ರಾಮ ವಿಕಾಸ ಸಭಾಭವನದಲ್ಲಿ ನಡೆಯಿತು.
ಜಯರಾಮ ನಾಯಕ್ ಮತ್ತು ಶ್ರೀಮತಿ ಮಲ್ಲಿಕಾ ದಂಪತಿಯನ್ನು ಶಾಲು ಹೊದಿಸಿ ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ,ಹಿರಿಯರಾದ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಕೆವಿಜಿ ಐಟಿಐ ಉಪಪ್ರಾಂಶುಪಾಲ ದಿನೇಶ್ ಮಡ್ತಿಲ,ವರ್ತಕರ ಸಂಘದ ಅಧ್ಯಕ್ಷ ನಿಖಿಲ್ ಮಡ್ತಿಲ,ಮಂಗಳೂರು ವಿಶ್ವವಿದ್ಯಾಲಯ ಮಾಜಿ ಸೆನೆಟ್ ಸದಸ್ಯ ಪ್ರದೀಪ್ ರೈ ಪಾಂಬಾರು, ಚಾಲಕ ಮಾಲಕ ಸಂಘದ ಅಧ್ಯಕ್ಷ ಮಹೇಶ್ ಜಬಳೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿ ಮಾತನಾಡಿದರು.
ರಾಜೇಶ್ ನೆಕ್ರೆಪ್ಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ , ರಮೇಶ್ ಮಿತ್ತಮೂಲೆ ವಂದಿಸಿದರು.