Home ಪ್ರಚಲಿತ ಸುದ್ದಿ ಸುಳ್ಯ ವೆಂಕಟರಮಣ ಸೊಸೈಟಿ : 17 ನಿರ್ದೇಶಕರ ಅವಿರೋಧ ಆಯ್ಕೆ

ಸುಳ್ಯ ವೆಂಕಟರಮಣ ಸೊಸೈಟಿ : 17 ನಿರ್ದೇಶಕರ ಅವಿರೋಧ ಆಯ್ಕೆ

0

ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಗೆ 17 ನಿರ್ದೇಶಕರ ಅವಿರೋಧ ಆಯ್ಕೆ ನಡೆದಿರುವುದಾಗಿ ತಿಳಿದುಬಂದಿದೆ.

ಹಿಂದುಳಿದ ವರ್ಗ ಬಿ ಕೆಟಗೆರಿಯಿಂದ ಪಿ.ಎಸ್.ಗಂಗಾಧರ್, ಮಹಿಳಾ ಮೀಸಲು ಸ್ಥಾನದಿಂದ ನಳಿನಿ ಸೂರಯ್ಯ, ಪ್ರೇಮ ಲೋಕೇಶ್ ರವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧ ಆಯ್ಕೆಯಾಗಿದ್ದರು.

ಆದರೆ ಎಸ್.ಟಿ. ಮೀಸಲು ಒಂದು ಸ್ಥಾನಕ್ಕೆ ಜಯಲಲಿತಾ ಹಾಗೂ ಭೋಜಪ್ಪ‌ ನಾಯ್ಕ್ ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ಭೋಜಪ್ಪ ನಾಯ್ಕರು ಇಂದು ನಾಮಪತ್ರ ವಾಪಸು ಪಡೆದಿದ್ದು, ಜಯಲಲಿತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ 13 ನಿರ್ದೇಶಕ ಸ್ಥಾನಕ್ಕೆ 20 ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಇಂದು ಕೆ.ಸಿ. ನಾರಾಯಣ ಗೌಡ, ಡಾ.ಎನ್.ಎ. ಜ್ಞಾನೇಶ್, ಹೇಮಚಂದ್ರ ಐ.ಕೆ., ಸೋಮಶೇಖರ ಕೊಯಿಂಗಾಜೆ, ಶ್ರೀಹರಿ ಕುಕ್ಕುಡೇಲು, ಶ್ರೀಕಾಂತ್ ಮಾವಿನಕಟ್ಟೆ, ರಜತ್ ಅಡ್ಕಾರ್ ನಾಮಪತ್ರ ಹಿಂಪಡೆದಿರುವುದರಿಂದ, ನಿತ್ಯಾನಂದ ಮುಂಡೋಡಿ, ಎ.ವಿ.ತೀರ್ಥರಾಮ, ಜಾಕೆ ಸದಾನಂದ, ಪಿ.ಸಿ.ಜಯರಾಮ, ಮೋಹನ್ ರಾಮ್ ಸುಳ್ಳಿ, ಕೆ.ಸಿ.ಸದಾನಂದ, ಚಂದ್ರಾ ಕೋಲ್ಚಾರ್, ದಿನೇಶ್ ಮಡಪ್ಪಾಡಿ, ಎನ್.ಎಸ್.ದಾಮೋದರ, ಶೈಲೇಶ್ ಅಂಬೆಕಲ್ಲು, ಸದಾನಂದ ಮಾವಜಿ, ದೊಡ್ಡಣ್ಣ ಬರೆಮೇಲು, ಲಕ್ಷ್ಮೀನಾರಾಯಣ ಅವಿರೋಧವಾಗಿ ಆಯ್ಕೆಯಾದರು.

ಇಲ್ಲಿ ಹಿಂದುಳಿದ ವರ್ಗ ಎ ಹಾಗೂ ಪ.ಜಾತಿ ಮೀಸಲು ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದಿರುವ ಕಾರಣ ಆ ಸ್ಥಾನಗಳು ಖಾಲಿಯಾಗಿದೆ.

ಒಟ್ಟು 19 ನಿರ್ದೇಶಕ ಸ್ಥಾನಗಳಲ್ಲಿ 17 ಸ್ಥಾನಗಳಿಗೆ ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದೆ.

NO COMMENTS

error: Content is protected !!
Breaking