ಪೂರ್ವಭಾವಿ ಸಭೆ, ಸ್ವಾಗತ ಸಮಿತಿ ರಚನೆ
ಸುಳ್ಯದ ನಾವೂರು ಮಖಾಂ ನಲ್ಲಿ ಅಂತ್ಯ ವಿಶ್ರಮ ಗೊಳ್ಳುತ್ತಿರುವ ಅಸ್ಸಯ್ಯದ್ ಅಲವಿ ತಂಙಳ್ (ವಲಿಯ ತಂಙಳ್) ರವರ ಹೆಸರಿನಲ್ಲಿ ಆಚರಿಸಿಕ್ಕೊಂಡು ಬರುತ್ತಿರುವ ಸ್ವಲಾತ್ ಮಜ್ಲಿಸ್ ಹಾಗೂ 25 ನೇ ಆಂಡ್ ನೇರ್ಚೆ ಹಾಗೂ ಏಕ ದಿನ ಮತ ಪ್ರಭಾಷಣ ಕಾರ್ಯಕ್ರಮ ಫೆ.16 ರಂದು ನಾವೂರು ಮಖಾಂ ಪರಿಸರದಲ್ಲಿ ನಡೆಯಲಿದೆ.















ಈ ಕಾರ್ಯಕ್ರಮದ ಯಶಸ್ವಿ ಗಾಗಿ ನಾವೂರು ಸ್ವಲಾತ್ ಮಜ್ಲಿಸ್ ಇದರ ಗೌರವ ಅಧ್ಯಕ್ಷ ಹಾಗೂ ವಲಿಯ ತಂಙಳ್ ರವರ ಪುತ್ರ ಸಯ್ಯಿದ್ ಕುಂಞಿಕೋಯ ತಂಙಳ್ ಸಅದಿ ರವರ ಅಧ್ಯಕ್ಷತೆ ಯಲ್ಲಿ ಪೂರ್ವಭಾವಿ ಸಭೆ ತಂಙಳ್ ರವರ ನಿವಾಸದಲ್ಲಿ ನಡೆಯಿತು.
ಸಯ್ಯಿದ್ ಕುಂಞಿ ಕೋಯ ತಂಙಳ್ ದುವಾ ನೆರವೇರಿಸಿ ಸಭೆಯನ್ನು ಉದ್ಘಾಟಿಸಿದರು.ಬಳಿಕ ವಾರ್ಷಿಕ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆದು
ಸ್ವಾಗತ ಸಮಿತಿಯನ್ನು ರಚನೆ ಮಾಡಿ ಗೌರವ ಅಧ್ಯಕ್ಷರಾಗಿ ‘ಸಯ್ಯಿದ್ ಕುಂಞಿ ಕೋಯ ತಂಙಳ್, ಗೌರವ ಸಲಹೆ ಗಾರರಾಗಿ ಸಯ್ಯಿದ್ ಪೂಕೋಯ ತಂಙಳ್, ಸಯ್ಯಿದ್ ಝೖನುಲ್ ಆಬಿದ್ದೀನ್ ತಂಙಳ್,ಉಮ್ಮರ್ ಕೆ ಎಸ್ ರವರನ್ನು ಆಯ್ಕೆ ಮಾಡಲಾಯಿತು. ಚೇರ್ಮೆನ್ ಆಗಿ ಅಬ್ದುಲ್ಲಾ ಸಖಾಫಿ ಪಾರೆ,ವೈಸ್ ಚೇರ್ಮೆನ್ ರಾಗಿ ಜಬ್ಬಾರ್ ಸಖಾಫಿ,ಅಬ್ದುಲ್ಲಾ ಹಾಜಿ ಜಯನಗರ,ಕನ್ವೀನರ್ ಆಗಿ ಹಸೈನಾರ್ ಜಯನಗರ,ವೈಸ್ ಕನ್ವಿನರ್ ಗಳಾಗಿ ಮುನೀರ್,ಸಾಹುಲ್ ಹಮೀದ್,ಕೋಶಾಧಿಕಾರಿ ಅಲಿ ನ್ಯೂಮ,ಪ್ರಚಾರ ಸಮಿತಿ ಕನ್ವಿನರ್ ರಾಗಿ ಶರೀಫ್ ಜಟ್ಟಿಪಳ್ಳ,ರಶೀದ್ ಜಟ್ಟಿಪಳ್ಳ,ಸದಸ್ಯರುಗಳಾಗಿ ಬಶೀರ್ ಸಖಾಫಿ ಜಯನಗರ,ಅಶ್ರಫ್ ಅಂಜುಮಿ,ಹಾರಿಸ್ ಬೋರುಗುಡ್ಡೆ,ಅಬೂಬಕ್ಕರ್ ಜಟ್ಟಿಪಳ್ಳ,ಸಿದ್ದೀಕ್ ಕಟ್ಟೆಕ್ಕಾರ್ಸ್,ರಂಶಾದ್ ಅಂಗ,ಶರೀಫ್ ಜಯನಗರ, ತೌಫೀಕ್ ಜಯನಗರ, ಜಝಿಲ್ ಜಯನಗರ ಇವರನ್ನು ಆಯ್ಕೆ ಮಾಡಲಾಯಿತು.
ಹಸೈನಾರ್ ಜಯನಗರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.









