ದ.ಕ.ಹಾಲು ಒಕ್ಕೂಟದ ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ಶೇಖರಣೆ ವಿಭಾಗದಲ್ಲಿ ಉಪವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಕೇಶವ ಸುಳ್ಳಿ ಜ.31 ರಂದು ನಿವೃತ್ತರಾದರು.
1988ರಲ್ಲಿ ಬೆಂಗಳೂರು ಪಶುವೈದ್ಯಕೀಯ ಕಾಲೇಜಿನಿಂದ ಬಿ.ವಿ.ಎಸ್ಸಿ. ಪದವಿ ಪಡೆದು 1988-1990ರವರೆಗೆ ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ಕಾಲು ಮತ್ತು ಬಾಯಿ ರೋಗ ನಿಯಂತ್ರಣ ಯೋಜನೆಯಲ್ಲಿ ಪಶುವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿರುತ್ತಾರೆ. 1990 ರಿಂದ 2012ರವರೆಗೆ ಬೆಳ್ಳಾರೆಯಲ್ಲಿ ಖಾಸಗಿ ಪಶು ಚಿಕಿತ್ಸಾಲಯ ಪ್ರಾರಂಭಿಸಿ ಸೇವೆ ಸಲ್ಲಿಸಿರುತ್ತಾರೆ. 2012 ರಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಸೇರ್ಪಡೆಗೊಂಡು ಹತ್ತು ವರ್ಷಗಳ ಕಾಲ ಸುಳ್ಯ ಶಿಬಿರ ಕಚೇರಿಯಲ್ಲಿ ಪಶು ವೈದ್ಯರಾಗಿ ಸೇವೆ ಸಲ್ಲಿಸಿರುತ್ತಾರೆ. 2021 ಸೆಪ್ಟೆಂಬರ್ ನಲ್ಲಿ ಉಪ ವ್ಯವಸ್ಥಾಪಕವಾಗಿ ಭರ್ತಿ ಪಡೆದು, 2022 ರಿಂದ ಮಂಗಳೂರು ಕೇಂದ್ರ ಕಚೇರಿಯಲ್ಲಿ ಉಪ ವ್ಯವಸ್ಥಾಪಕರಾಗಿ ದ ಕ ಜಿಲ್ಲೆಯ ಬಿಎಂಸಿಗಳ ಉಸ್ತುವಾರಿಯ ಜವಾಬ್ದಾರಿಯನ್ನು ನಿರ್ವಹಿಸಿರುತ್ತಾರೆ. 2023 ರಿಂದ ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ಶೇಖರಣೆ ವಿಭಾಗದ ಉಪ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ಜ.1ರಂದು ನಿವೃತ್ತಿ ಹೊಂದಿರುತ್ತಾರೆ .















ಸುಳ್ಯ ಕಸಬಾ ಗ್ರಾಮದ ಮೂಡೆಕಲ್ಲಿನಲ್ಲಿ ವಾಸವಾಗಿರುವ ಇವರು ಪತ್ನಿ ಭಾರತಿ ಕೆ.ಎಸ್. ಗೃಹಿಣಿಯಾಗಿದ್ದು ,ಪುತ್ರಿ ಶ್ರಾವ್ಯ ಕೆ.ಎಸ್. ಎಂ ಡಿ ಪದವಿ, ಪುತ್ರ ಶಮಂತ್ ಕೆ.ಎಸ್. ಎಂ .ಟೆಕ್ ಪದವಿಯ ವ್ಯಾಸಾಂಗ ಮಾಡುತ್ತಿದ್ದಾರೆ.


