21 ವರ್ಷದ ಬಳಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮ

0

ಗಾಂಧಿನಗರ ಕೆಪಿಎಸ್‌ನಲ್ಲಿ ಒಟ್ಟು ಸೇರಿದ 2004 ರ ಶಾಲಾ ಸಹಪಾಠಿಗಳು, ಅಧ್ಯಾಪಕರು

ಸ್ಮರಣೀಯ ಕಾರ್ಯಕ್ರಮದಲ್ಲಿ ಭಾವುಕರಾದ ಶಿಕ್ಷಕರು

ಗಾಂಧಿನಗರ ಸರಕಾರಿ ಪ್ರೌಢಶಾಲೆ ಇಂದಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ 21 ವರ್ಷ ಹಿಂದಿನ 7 ನೇ ತರಗತಿ ವಿದ್ಯಾರ್ಥಿಗಳ ಮತ್ತು ಅಂದಿನ ಶಿಕ್ಷಕರುಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜನವರಿ 26 ರಂದು ನಡೆಯಿತು.

21 ವರ್ಷಗಳ ಬಳಿಕ ಅಂದಿನ ಏಳನೇ ತರಗತಿಯಲ್ಲಿ ಕಲಿತ ಶಾಲಾ ಸಹಪಾಠಿಗಳು ಅಂದು 48 ವಿಧ್ಯಾರ್ಥಿಗಳು ಇದ್ದು ಬ್ಯಾಚ್ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ 40 ಸಹಪಾಠಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.


ಅಲ್ಲದೆ ಸಮ್ಮಿಲನದಲ್ಲಿ ಅಂದು ಕಲಿಸಿದ ತಮ್ಮ ಶಿಕ್ಷಕರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸಿ ಏಳು ಮಂದಿ ಶಿಕ್ಷಕ – ಶಿಕ್ಷಕಿ ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ,ಶಾಲಾ ಮುಖ್ಯೋಪಾಧ್ಯಾಯ ಪದ್ಮನಾಭ ಎಸ್ ಡಿ ಎಂ ಸಿ ಅಧ್ಯಕ್ಷ ಚಿದಾನಂದ ಕುದ್ಪಾಜೆ ಇವರುಗಳು ಭಾಗವಹಿಸಿದರು.

ಹಳೆ ವಿದ್ಯಾರ್ಥಿ ಮಜೀದ್ ಸ್ವಾಗತಿಸಿ, ರಿಯಾಜ್ ವಂದಿಸಿದರು ಮಶೂದ್ ಕಾರ್ಯಕ್ರಮ ನಿರೂಪಿಸಿದರು.

ಭಾವುಕರಾದ ಮಾಧವ ಮಾಸ್ಟರ್

2004 ರ 7 ನೇ ತರಗತಿ ಬ್ಯಾಚ್ ನ ವಿಧ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟ ಶಿಕ್ಷಕರ ವೃಂದ ಕಾರ್ಯಕ್ರಮದಲ್ಲಿ ಹಾಜರಿದ್ದು ಪೂರ್ವ ವಿಧ್ಯಾರ್ಥಿಗಳನ್ನು ಮತ್ತು ಕಾರ್ಯಕ್ರಮವನ್ನು ನೆನೆದು ತಮ್ಮ ಭಾಷಣದ ಮಾತಿನಲ್ಲಿ ಭಾವನೆಗಳು ತಡೆಯಲಾಗದೆ ಭಾವುಕರಾದರು.

ಶಿಕ್ಷಕಿಯರಾದ ಶ್ರೀಮತಿ ಭವಾನಿ, ಮನೋರಮಾ,ಪ್ರೇಮ ಟೀಚರ್ ಹಾಗೂ ಶಿಕ್ಷಕರುಗಳಾದ ಮಾಧವ ಗೌಡ, ಚಂಗಪ್ಪ ಮಾಸ್ಟರ್, ಜಯಕುಮಾರ್ ಅದೇ ರೀತಿ ಪ್ರಾಥಮಿಕ ಶಾಲೆಯ ಪ್ರಸ್ತುತ ಹೆಡ್ ಮಾಸ್ಟರ್ ಪದ್ಮನಾಭ ಸಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಾಧನೆಗೆ ಗೌರವ
ಸಹಪಾಠಿ ಗಳಲ್ಲಿ ಸರಕಾರಿ ಹುದ್ದೆ ಗಿಟ್ಟಿಸಿಕೊಂಡ ಸಾಯಿನಾ ಕಲ್ಲುಮುಟ್ಲು ಮತ್ತು ಸುಮಯ್ಯ ಗಾಂಧಿನಗರ ಇವರಿಬ್ಬರನ್ನು ಸ್ನೇಹ – ಸಮ್ಮಿಲನ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಶಾಲಾ ಸಹಪಾಠಿಗಳನ್ನು ಸಂಘಟಿಸುವಲ್ಲಿ ಯಶಸ್ವಿಯಾದ ಮಶೂದ್ ಮತ್ತು ಸಂಗಡಿಗರು

ಸ್ನೇಹ – ಸಮ್ಮಿಲನ ಕಾರ್ಯಕ್ರಮ ಕೇಂದ್ರ ಬಿಂದು ಈ ಕಾರ್ಯಕ್ರಮದ ಆಯೋಜಕರು.
2004 ಏಳನೇ ತರಗತಿಯ ಶಾಲಾ ಸಹಪಾಠಿಗಳ ಡಾಟ ಅಂಕಿ – ಅಂಶ ಕಲೆಹಾಕಿ ಅವರನ್ನು ಹುಡುಕಿಕೊಂಡು ಹೋಗಿ ವ್ಯವಸ್ಥಿತವಾಗಿ ಗುಂಪು ರಚನೆ ಮಾಡಿ ಕಾರ್ಯಕ್ರಮವನ್ನು ಅಯೋಜಿಸಿದ್ದಾರೆ. ವಿಶೇಷವಾಗಿ ಹಳೆ ವಿದ್ಯಾರ್ಥಿಗಳಾದ ರಿಯಾಝ್ ಕಾರ್ಲೆ, ಮಜೀದ್ ಕಲ್ಲುಮುಟ್ಲು,ನೌಶಾದ್ ನಾವೂರು,ಸರ್ಪುದ್ದೀನ್ ಕಲ್ಲುಮುಟ್ಲು ,ಸಿದ್ದೀಕ್, ಮತ್ತು ಮಸೂದ್ ಮುಂತಾದವರ ನೇತ್ರತ್ವದಲ್ಲಿ 2004 ನೇ ಸಾಲಿನಲ್ಲಿ ಶಾಲೆಯಲ್ಲಿ ತೆಗಿಸಿದಂತಹ ಭಾವಚಿತ್ರವನ್ನು ಮುಂದಿಟ್ಟುಕೊಂಡು ಎಲ್ಲರ ವಿಳಾಸ ನಂಬ್ರಗಳನ್ನು ಸಂಗ್ರಹಿಸಿ,ನಂತರ ವಾಟ್ಸಪ್ ಗ್ರೂಪುಗಳನ್ನು ರಚಿಸಿ ಆ ಮೂಲಕ ಶಾಲೆಯ ಅಧ್ಯಾಪಕರು ಹಾಗೂ, ವಿದ್ಯಾರ್ಥಿಗಳನ್ನು ಸಂಪರ್ಕಿಸಿ,ವಾಟ್ಸಪ್ ಗ್ರೂಪ್ ಗಳ ಮೂಲಕ ಎಲ್ಲಾ ಸ್ನೇಹಿತರನ್ನು ಸೇರಿಸಿಕೊಂಡು ಬಾಲ್ಯದ ನೆನಪುಗಳನ್ನು ಪುನ: ಮರುಕಳಿಸಿ ತರುವ ಉದ್ದೇಶವನ್ನು ಮುಂದಿಟ್ಟು ಈ ಕಾರ್ಯಕ್ರಮವನ್ನು ಮಾಡಲಾಗಿದೆ.ವಿದ್ಯಾರ್ಥಿಗಳಾದ ತಸ್ಮಿಯ,ನೆಸೀರ, ಹಾಗೂ ರಂಸೀನಾ ಸಹಕಾರ ನೀಡಿದರು.

ಶಿಕ್ಷಣ ಕೊಟ್ಟ ಅಧ್ಯಾಪಕರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಅಧ್ಯಾಪಕರುಗಳ ದೂರವಾಣಿ ಸಂಪರ್ಕವನ್ನು ಪಡೆದುಕೊಂಡು ಅವರೊಂದಿಗೆ ಸ್ನೇಹ ಸಮ್ಮಿಲನದ ಆ ಕ್ಷಣಕ್ಕೆ ಬರಮಾಡಿಕೊಳ್ಳಲು ಅವರ ಮನೆಗೆ ಭೇಟಿ ನೀಡಿ ಕೇಳಿಕೊಂಡು ಕಾರ್ಯಕ್ರಮಕ್ಕೆಅಹ್ವಾನ ನೀಡಿ ಅವರನ್ನು ಸ್ವಾಗತಿಸಲಾಯಿತು.

ಸಮ್ಮಿಲನದಲ್ಲಿ ಅಗಲಿದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಿಗೆ ಮೌನ ಪ್ರಾರ್ಥನೆ ಮಾಡಲಾಯಿತು ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಮ್ಮಿಲನದಲ್ಲಿ ಭಾಗವಹಿಸಿದ್ದ ಅಧ್ಯಾಪಕರುಗಳಿಗೆ ಶಾಲು ಹೊದೆಸಿ ಸ್ಮರಣೆಕೆಗಳನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಕೊನೆಯ ಅಂಗವಾಗಿ ಅಂದಿನ ವಿದ್ಯಾರ್ಥಿಗಳಾಗಿದ್ದವರಿಗೆ ಆಯೋಜಿಸಿದ ಕ್ರೀಡಾಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಿ ಮತ್ತು ವಿಜೇತರಿಗೆ ಬಹುಮಾನವನ್ನು ನೀಡಲಾಯಿತು.