ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಆಡಳಿತ ಮಂಡಳಿ ಸಭೆನಮ್ಮಲ್ಲಿ ಒಗ್ಗಟ್ಟಿದೆ : ಸಂಘ ಸ್ಪಷ್ಟನೆ

0

ಧ್ವನಿ ಬೆಳಕು ಮತ್ತುTTC ಶಾಮಿಯಾನ ಮಾಲಕರ ಸಂಘ ಸುಳ್ಯ ದ.ಕ. ಇದರ ಆಡಳಿತ ಮಂಡಳಿಯ ಸಭೆ ಜ. 30 ರಂದು ಸಂಘದ ಕಚೇರಿಯಲ್ಲಿ ನಡೆದು, ನಮ್ಮ ಸಂಘಟನೆಯ ಸದಸ್ಯರು ಒಗ್ಗಟ್ಟಿನಿಂದಿದ್ದು, ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ಒಬ್ಬರ ಶಾಮಿಯಾನ ತೆಗೆದು ಇನ್ನೊಬ್ಬರ ಶಾಮಿಯಾನ ಹಾಕಲು ಒಪ್ಪಿದ್ದೇವೆ ” ಎಂದು ಸ್ಪಷ್ಟನೆ ನೀಡಿದ್ದಾರೆ.

ಪೆರಾಜೆ ಶಾಸ್ತಾವು ದೇವಸ್ಥಾನದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಶಾಮಿಯಾನ ಅಳವಡಿಸುವುದಕ್ಕಾಗಿ ಸುಳ್ಯದ ಸಹನ ಶಾಮಿಯಾನದವರಿಗೆ ದೇವಸ್ಥಾನದ ಆಡಳಿತ ಮಂಡಳಿಯವರು ನೀಡಿದ್ದರು. ಇದರ ಜವಾಬ್ದಾರಿಯನ್ನು ನಿರ್ವಹಿಸಲು ಸ್ವಾತಿ ಮೈಕ್ಸ್ ನವರಿಗೆ ವಹಿಸಲಾಗಿತ್ತು. ಇದರ ಬಗ್ಗೆ ಸ್ಥಳೀಯ ಹಿಂದೂ ಯುವಕರು ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಸಂಘದ ಸಭೆ ನಡೆಸಿ ಸಹನಾ ಶಾಮಿಯಾನದವರೊಂದಿಗೆ ಮಾತುಕತೆ ನಡೆಸಿ ಗುರುಪ್ರಕಾಶ್ ಶಾಮಿಯಾನದವರಿಗೆ ಹಾಕುವಂತೆ ಸಂಘದ ವತಿಯಿಂದ ನಿರ್ಧರಿಸಲಾಗಿದೆ ” ಎಂದು ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್., ಸಹನಾ ಶಾಮಿಯಾನರಾದ ಮಾಲಕರಾದ ಜಿ.ಎ.ಮಹಮ್ಮದ್,
ತಿಳಿಸಿದ್ದಾರೆ.

ಸಭೆಯಲ್ಲಿ ಎನ್ ಎಸ್ ರಾಜೇಶ್, ಸಂಶುದ್ದೀನ್ ಜೆ.ಪಿ., ಎಸ್ ಪಿ ಲೋಕನಾಥ, ಅಬ್ದುಲ್ ರಜಾಕ್ ಜಿ., ಜಿ.ಎ. ಮಹಮ್ಮದ್, ಗುರುಪ್ರಕಾಶ್, ಹಸನ್, ಸತ್ಯ ಪ್ರಕಾಶ್, ಶ್ರೀಧರ, ರಾಜೇಶ್ ರೈ ಉಬರಡ್ಕ, ಜಯಪ್ರಕಾಶ್ (ಪಕ್ಕು), ಸುಕುಮಾರ ಮೇನಾಲ, ಬಾಲಚಂದ್ರ, ಹರೀಶ್ ಕೊರತ್ಯಡ್ಕ, ಜಿ.ಜಿ. ನಾಯಕ್ ಇದ್ದರು.