ಕಾಂತಮಂಗಲ ಗುತ್ಯಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಿದ ಡಾ.ಕೆ.ವಿ.ಚಿದಾನಂದ ದಂಪತಿ

0

ಅಣ್ಣ – ಅತ್ತಿಗೆಯನ್ನು ಬರಮಾಡಿಕೊಂಡು, ಆಶೀರ್ವಾದ ಪಡೆದ ಡಾ.ರೇಣುಕಾಪ್ರಸಾದ್ ಕೆ.ವಿ. ದಂಪತಿ

ಡಾ.ಕೆ.ವಿ.ರೇಣುಕಾಪ್ರಸಾದ್ ರವರು ಧರ್ಮದರ್ಶಿಯಾಗಿರುವ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರ ಕುರುಂಜಿ ಇಲ್ಲಿ ವಾರ್ಷಿಕ ಉತ್ಸವ ಕಾರ್ಯಕ್ರಮ ಜ.31ರಂದು ಅದ್ದೂರಿಯಾಗಿ ನಡೆಯಿತು.

ವೈದಿಕ ಕಾರ್ಯಕ್ರಮಗಳು ಜ.29ರಿಂದ ಆರಂಭಗೊಂಡು, ಜ.31ರಂದು ವಿಶೇಷ ಪೂಜೆಗಳು ನಡೆದವು.

ಈ ಬಾರಿ ಗುತ್ಯಮ್ಮ ದೇವಿ ಕ್ಷೇತ್ರಕ್ಕೆ ಡಾ.‌ಕೆ.ವಿ.ಚಿದಾನಂದ ಹಾಗೂ ಶ್ರೀಮತಿ ಶೋಭಾ ಚಿದಾನಂದರು ಆಗಮಿಸಿದರು. ಅವರು ಬರುತ್ತಿದ್ದಂತೆ ಅವರನ್ನು ಸಹೋದರ ಡಾ.ರೇಣುಕಾಪ್ರಸಾದ್ ಕೆ.ವಿ. ಯವರ ಆಡಳಿತದ ಕಾಲೇಜಿನ ಸಿಬ್ಬಂದಿಗಳು ಒಳ ಕರೆದುಕೊಂಡು ಹೋದರು. ಈ ವೇಳೆ ಪೂಜಾ ಕಾರ್ಯದಲ್ಲಿ ನಿರತರಾಗಿದ್ದ ಡಾ.ರೇಣುಕಾಪ್ರಸಾದ್ ರವರು ಡಾ.ಚಿದಾನಂದರ ಬಳಿ ಹೋಗಿ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು. ಬಳಿಕ ಅತ್ತಿಗೆ ಶೋಭಾ ಚಿದಾನಂದರ ಕಾಲಿಗೆರಗಿ ಆಶೀರ್ವಾದವನ್ನು ರೇಣುಕಾಪ್ರಸಾದ್ ದಂಪತಿ ಪಡೆದರು.‌

ಬಳಿಕ ಸಹೋದರಿಬ್ಬರೂ ಜತೆಯಾಗಿ‌ ನಿಂತು ಪೂಜಾ ಕಾರ್ಯ ನಡೆಸಿದರು.