ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಆಶ್ರಯದಲ್ಲಿ
ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಹೆಬ್ರಿ ಇವರು ವೇದಗುರು ಶ್ರೀ ಕೃಷ್ಣ ಅಡಿಗ ಹಾಗೂ ಶ್ರೀಮತಿ ಶಾರದಾ ಅಡಿಗ ಇವರ ನೆನಪಿನಲ್ಲಿ ಕೊಡಮಾಡುವ2025 ನೇ ಸಾಲಿನ ಶಾರದಾಕೃಷ್ಣ ಪುರಸ್ಕಾರವನ್ನು ರಂಗ ನಿರ್ದೇಶಕ ಡಾ| ಜೀವನ್ ರಾಂ ಸುಳ್ಯ ರಿಗೆ ನೀಡಿ ಗೌರವಿಸಲಾಯಿತು.
ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕೇಂದ್ರದಲ್ಲಿ ನಡೆದ ಸಂಸ್ಜೃತಿ ಉತ್ಸವದಲ್ಲಿ ಕಲಾ ಪೋಷಕರು, ಉಡುಪಿ ಜಿಲ್ಲಾ ಸ್ಕೌಟ್ ಗೈಡ್ ಆಯುಕ್ತರಾದ ಇಂದ್ರಾಳಿ ಜಯಕರ ಶೆಟ್ಟಿ ಇವರು ಜೀವನ್ ರಾಂ ರನ್ನು ಗೌರವಿಸಿದರು.















ಪುರಸ್ಕಾರವು ಪ್ರಶಸ್ತಿ ಫಲಕ, ಮಾನ ಪತ್ರ ಹಾಗೂ ರೂ: 25,000 ನಗದು ಹೊಂದಿತ್ತು. ಹಿರಿಯ ಸಾಹಿತಿ ಮುರಳೀಧರ ಉಪಾಧ್ಯಾಯ ಹಿರಿಯಡ್ಕ, ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಹಿರಿಯ ಜಾದೂಗಾರ ಪ್ರೊ| ಶಂಕರ್, ಲ| ಎನ್.ಎಂ.ಹೆಗಡೆ, ಟ್ರಸ್ಟ್ ನ ವಾಸುದೇವ ಅಡಿಗ , ನಾಗರಾಜ್ ಹೆಬ್ಬಾರ್, ರಾಘವೇಂದ್ರ ಪ್ರಭು ಕರ್ವಾಲೋ, ಡಾ.ಭಾರ್ಗವಿ ಐತಾಳ್, ಸಂಚಾಲಕರಾದ ರವಿರಾಜ್ ಹೆಚ್.ಪಿ., ನಟಿ ಶಿಲ್ಪಾ ಜೋಶಿ, ಸುರೇಶ್ ಶೆಣೈ, ನಾಗರಾಜ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಪ್ರದರ್ಶನಗೊಂಡ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯದ, ಶ್ರೀಮತಿ ವೈದೇಹಿ ರಚಿಸಿ, ಜೀವನ್ ರಾಂ ಸುಳ್ಯ ನಿರ್ದೇಶನದ ನಾಯಿಮರಿ ನಾಟಕವು ತುಂಬಿದ ಸಾಭಾಂಗಣದ ಪ್ರೇಕ್ಷಕರ ಬಹುಮೆಚ್ಚುಗೆಗೆ ಪಾತ್ರವಾಯಿತು.










