ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಗುಂಡ್ಯ ಮಾಡಾರಮನೆ ಉಳ್ಳಾಕುಲು ಸಾನಿಧ್ಯದ ಮೊರಂಗಲ್ಲಿನಲ್ಲಿ ನೂತನವಾಗಿ ನಿರ್ಮಿಸಿರುವ ಉಳ್ಳಾಕುಲು ಚಾವಡಿಯಲ್ಲಿ ಪ್ರತಿಷ್ಠಾ ಕಲಶೋತ್ಸವವು ಫೆ.2 ಮತ್ತು 3 ರಂದು ವೈದಿಕ ವಿಧಿ ವಿಧಾನಗಳೊಂದಿಗೆ ಕುಂಟಾರು ಕ್ಷೇತ್ರದ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆಯಲಿರುವುದು.















ಫೆ.2 ರಂದು ಬೆಳಗ್ಗೆ ಉಗ್ರಾಣ ತುಂಬುವುದು, ಸಂಜೆ ವೈದಿಕ ಕಾರ್ಯಕ್ರಮ ಹಾಗೂ ಮರುದಿನ ಬೆಳಗ್ಗೆ ನೂತನ ಚಾವಡಿಯಲ್ಲಿ ಶ್ರೀ ದೈವಗಳ ಆಯುಧ ಪ್ರತಿಷ್ಠೆಯಾಗಿ ಪ್ರತಿಷ್ಠಾ ಕಲಶವುನೆರವೇರಲಿರುವುದು. ಈ ಸಂದರ್ಭದಲ್ಲಿ ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದಲ್ಲಿ ದೈವಗಳ ವಿಗ್ರಹ ಪ್ರತಿಷ್ಠಾ ಕಾರ್ಯವು ನಡೆಯಲಿರುವುದು.










