ಪಂಜ ಜಾತ್ರೋತ್ಸವದ ಪ್ರಯುಕ್ತ:ಯಕ್ಷಗಾನ ಬಯಲಾಟ, ಸನ್ಮಾನ

0

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಧ್ವಜಾರೋಹಣ ಪ್ರಯುಕ್ತ ಯಕ್ಷ ಮಿತ್ರರು ಪಂಜ, ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಪಂಜ ಇದರ ವತಿಯಿಂದ ಫೆ.1 ರಂದು ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಮಂಗಳೂರು ರವರಿಂದ ರಂಗಸ್ಥಳ ಎಂಬ ಯಕ್ಷಗಾನ ಬಯಲಾಟ ಪ್ರದರ್ಶನ ದೇಗುಲದ ವಠಾರದಲ್ಲಿ ನಡೆಯಿತು.
ಈ ವೇಳೆ ಸಮಾಜ ಸೇವಕ ಡಾ.ರವಿ ಕಕ್ಕೆಪದವು, ಯಕ್ಷಗಾನ ಕಲಾವಿದ ಯಕ್ಷಮಣಿ ಗಿರೀಶ್ ಗಡಿಕಲ್ಲು, ಹಿರಿಯ ಕಲಾವಿದ ಮೋಹನ್ ಆಚಾರ್ಯ ಪಂಜ ರವರಿಗೆ ಸನ್ಮಾನ ನಡೆಯಿತು.
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಸರಪಾಡಿ ಅಶೋಕ್ ಶೆಟ್ಟಿ,ಯಕ್ಷಗಾನ ಕಲಾವಿದ ಗುಡ್ಡಪ್ಪ ಸುವರ್ಣ ರವರು ಸನ್ಮಾನಿಸಿದರು.
ಯಕ್ಷ ಮಿತ್ರರು ಪಂಜ ಸದಸ್ಯರಾದ
ಪುರುಷೋತ್ತಮ ನಾಗತೀರ್ಥ, ಪ್ರಶಾಂತ್ ಪಲ್ಲತ್ತಡ್ಕ, ವಸಂತ ಚೊಟ್ಟೆಮನೆ, ಜನಾರ್ಧನ ನಾಗತೀರ್ಥ, ಕೇಶವ ಪಲ್ಲತ್ತಡ್ಕ, ಸತೀಶ್ ಕೆಮ್ಮೂರು, ಪವನ್ ಪಲ್ಲತ್ತಡ್ಕ, ಸಿಂಚನ ಪಲ್ಲತ್ತಡ್ಕ, ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಪಂಜ ಇದರ ಅಧ್ಯಕ್ಷ ಹಿತೇಶ್ ಪಂಜದಬೈಲು, ಕಾರ್ಯದರ್ಶಿ ಶಶಿ ದಾಸ್ ನಾಗತೀರ್ಥ, ಕೋಶಾಧಿಕಾರಿ ನವೀನ್ ನಾಗತೀರ್ಥ ವೇದಿಕೆಯಲ್ಲಿ ಉಪಸ್ಥಿತರಿದ್ದರು. ‌
ಕಾರ್ಯಕ್ರಮದಲ್ಲಿ ಸೋಮಶೇಖರ ನೇರಳ ಸ್ವಾಗತಿಸಿದರು ,ನಿರೂಪಿಸಿದರು.