ಅಧ್ಯಕ್ಷರಾಗಿ ಮುನೀರ್ ಜಟ್ಟಿಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಕನಕಮಜಲು, ಕೋಶಾಧಿಕಾರಿಯಾಗಿ ಸೈಫುದ್ದೀನ್ ಅರಂತೋಡು
ಅನ್ಸಾರಿಯ ಎಜುಕೇಷನಲ್ ಟ್ರಸ್ಟ್ ಇದರ ಯುಎಇ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ಕಮೀಟಿ ಅಧ್ಯಕ್ಷರಾದ ಝೈನುದ್ದೀನ್ ಬೆಳ್ಳಾರೆ ಅವರ ನೇತೃತ್ವದಲ್ಲಿ ನಡೆಯಿತು.
ಬದ್ರುದ್ದೀನ್ ಪಟೇಲ್ ದುವಾ ನಿರ್ವಹಿಸಿದರು. ವಾರ್ಷಿಕ ಸಭೆಯು ಅನ್ಸಾರಿಯ ಯುಎಇ ಸಮೀತಿ ಮಾಜಿ ಕಾರ್ಯದರ್ಶಿ ಕಮಾಲ್ ಅಜ್ಜಾವರ ರರವರು ಉದ್ಘಾಟಿಸಿದರು.
ಕಾರ್ಯದರ್ಶಿ ನಾಸಿರ್ ಜಟ್ಟಿಪಳ್ಳ ಸ್ವಾಗತಿಸಿ ವರದಿ ಮಂಡಿಸಿದರು , ಗತ ವರ್ಷದ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಮುನೀರ್ ಜಟ್ಟಿಪಳ್ಳ ಮಂಡಿಸಿದರು.
ಅಧ್ಯಕ್ಷರಾದ ಝೈನುದ್ದೀನ್ ಬೆಳ್ಳಾರೆ ಪ್ರಾಸ್ತಾವಿಕ ಭಾಷಣ ಮಾಡಿ ಅನ್ಸಾರಿಯ ಗಲ್ಫ್ ಆಡಿಟೋರಿಯಂ ಗೆ ಸರ್ವ ರೀತಿಯಲ್ಲೂ ಸಹಾಯ ಸಹಕಾರ ನೀಡಿದ ಯುಎಇ ಸಮಿತಿ ಸದಸ್ಯರನ್ನು ಅಭಿನಂದಿಸಿದರು. ನಂತರ 2025 -26 ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು.















ಗೌರವಾದ್ಯೇಕ್ಷರಾಗಿ ಝೈನುದ್ದೀನ್ ಬೆಳ್ಳಾರೆ ,ಅಧ್ಯಕ್ಷರಾಗಿ ಮುನೀರ್ ಜಟ್ಟಿಪಳ್ಳ ,ಉಪಾಧ್ಯಕ್ಷ ರಾಗಿ ಲತೀಫ್ ನ್ಯಾಷನಲ್ ಹಾಗು ಹಮೀದ್ ಪೆರಾಜೆ ಕಬಾಯಲ್
ಪ್ರದಾನ ಕಾರ್ಯದರ್ಶಿಯಾಗಿ ಇಕ್ಬಾಲ್ ಟಿಎಂ ಕನಕಮಜಲು ಜೊತೆ ಕಾರ್ಯದರ್ಶಿಗಳಾಗಿ ನಾಸಿರ್ ಜಟ್ಟಿಪಳ್ಳ,ರಿಜ್ವಾನ್ ಅಡ್ಕಾರ್ ಹಾಗೂ ಕೋಶಾಧಿಕಾರಿಯಾಗಿ ಸೈಫುದ್ದೀನ್ ಅರಂತೋಡ್ ರವರನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮೀತಿ ಸದಸ್ಯರಾಗಿ ಬದ್ರುದ್ದೀನ್ ಅರಂತೋಡ್,ಕಾಸಿಮ್,ಅಝೀಝ್ ಕುಂಬಕ್ಕೋಡ್ ,ಹಮೀದ್ ಕೆಯು ಜಟ್ಟಿಪಳ್ಳ ,ಬಷೀರ್ ಎಲಿಮಲೆ, ಹಾಗು ಸಮಿತಿ ಸದಸ್ಯರಾಗಿ ರಿಫಾಯಿ ಗೂನಡ್ಕ ,ಬಾತಿಷಾ ಪೈಚಾರ್ ,ಲತೀಫ್ ಪೈಚಾರ್ ,ಹನೀಫ್ ಎನ್ಮೂರ್ ,ಝಾಕಿರ್ ಸುಳ್ಯ ,ಮೊಹಿದೀನ್ ಕಬಾಹಿಲ್ ರಹೀಮ್ ಹೈಸ್ಕೂಲ್,ಮುಹಮ್ಮದ್ ಶಾಹಿಲ್ (ಸಲ್ಲು) ಬಾರ್ಪಣೆ,ಲತೀಫ್ ಬಿಸ್ಮಿಲ್ಲಾ ಬೆಳ್ಳಾರೆ ರವರು ಅಯ್ಕೆ ಯಾದರು.










