ಮೈಸೂರಿನಲ್ಲಿ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಚೇತನೋತ್ಸವ -2025

0

ಗುರುದೇವ ಪ್ರಶಸ್ತಿ ಪ್ರದಾನ – ಅಕಾಡೆಮಿಯ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ

ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಚೇತನೋತ್ಸವ -2025 ಭರತನಾಟ್ಯ ಹಾಗೂ ಗುರುದೇವ ಪ್ರಶಸ್ತಿ ಪ್ರಧಾನ ಹಾಗೂ ಅಕಾಡೆಮಿಯ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮವು ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಫೆ.2ರಂದು ನಡೆಯಿತು.


ಕಾರ್ಯಕ್ರಮವನ್ನು ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಗೌಡ ಅವರು ಉದ್ಘಾಟಿಸಿದರು. ಗುರುದೇವ ಲಲಿತಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕ ಮೂಲತಃ ಕನಕಮಜಲಿನವರಾದ ಪಿ.ಎಂ. ರಾಧಾಕೃಷ್ಣ ಮೂರ್ಜೆ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀ ಗುರುದೇವ ಅಕಾಡೆಮಿಯ ಸಂಸ್ಥಾಪಕರಾದ ಶ್ರೀಮತಿ ಡಾ. ಚೇತನ ರಾಧಾಕೃಷ್ಣ ಪಿ.ಎಂ. ಅವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಆತ್ಮಾಲಯ ಅಕಾಡೆಮಿಯ ಅಧ್ಯಕ್ಷೆ ಕರ್ನಾಟಕ ಕಲಾಶ್ರೀ ಡಾ. ಪದ್ಮಜಾ ವೆಂಕಟೇಶ್ ಸುರೇಶ್ ಅವರಿಗೆ ಗುರುದೇವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಪ್ರಸ್ತುತಪಡಿಸುವ ಚೇತನೋತ್ಸವ 2025ರಲ್ಲಿ ವಿವಿಧ ಭರತನಾಟ್ಯ ಕಾರ್ಯಕ್ರಮದಲ್ಲಿ ಉತ್ತಮ ಅಂಕಗಳನ್ನು ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಇದೇ ಸಂದರ್ಭದಲ್ಲಿ ಗುರು ಶ್ರೀಮತಿ ಡಾ. ಚೇತನ ರಾಧಾಕೃಷ್ಣ ಅವರು ತಮ್ಮ ಶಿಷ್ಯೆ ಡಾ. ಸಹನಾ ರಾಜು ಅವರೊಂದಿಗೆ ಭರತನಾಟ್ಯ ಪ್ರದರ್ಶಿಸಿದರು. ಗುರುದೇವ ಅಕಾಡೆಮಿಯ ಫೈನ್ ಆರ್ಟ್ಸ್ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ಜರುಗಿತು.