ಸುಳ್ಯದಿಂದ ಒಡಿಯೂರಿಗೆ ಹೊರೆಕಾಣಿಕೆ

0

ಒಡಿಯೂರು ಶ್ರೀ ರಥೋತ್ಸವ, ತುಳುನಾಡ ಜಾತ್ರೆಯ ಅಂಗವಾಗಿ ಸುಳ್ಯ ತಾಲೂಕಿನಿಂದ ಕ್ಷೇತ್ರದ ಅಂಗ ಸಂಸ್ಥೆ ಮತ್ತು ಒಡಿಯೂರು ಸೇವಾ ಬಳಗದ ವತಿಯಿoದ ಹಸಿರು ಕಾಣಿಕೆಯನ್ನು ಸಮರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಒಡಿಯೂರು ಸೇವಾ ಬಳಗ ಸುಳ್ಯ ಇದರ ಅಧ್ಯಕ್ಷ ರಾಧಾಕೃಷ್ಣ ಪಕಳ, ಸೇವಾ ಬಳಗದ ಪೂರ್ವ ಅಧ್ಯಕ್ಷ ಜೆ. ಕೆ. ರೈ, ಗ್ರಾಮ ವಿಕಾಸ ಯೋಜನೆಯ ಸುಳ್ಯ ತಾಲೂಕಿನ ಪೂರ್ವಧ್ಯಕ್ಷ ವಿಶ್ವನಾಥ ಶೆಟ್ಟಿ, ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ಧ ಸಹಕಾರಿ ಸುಳ್ಯ ಶಾಖಾ ವ್ಯವಸ್ಥಾಪಕ ಸಂತೋಷ್ ಕುಮಾರ್, ಗ್ರಾಮ ವಿಕಾಸ ಯೋಜನೆಯ ಸುಳ್ಯ ತಾಲೂಕು ಮೇಲ್ವಿಚಾರಕಿ ಶ್ರೀಮತಿ ಗೀತಾ, ವಲಯ ಸಂಯೋಜಕರು, ಸೇವಾದೀಕ್ಷಿತರು ಹಾಗೂ ಬಳಗದ ಕಾರ್ಯದರ್ಶಿ ರಾಮದಾಸ್, ಖಜಾಂಚಿ ಗಂಗಾಧರ ಮಣಿಯಾಣಿ ಮತ್ತು ಗುರು ಬಂಧುಗಳು ಉಪಸ್ಥಿತರಿದ್ದರು. ಜೆ. ಕೆ. ರೈ ಸ್ವಾಗತಿಸಿ, ಸಂತೋಷ್ ಕುಮಾರ್ ವಂದಿಸಿದರು.