ಸುಳ್ಯ ಇಂದಿರಾ ಕ್ಯಾಂಟೀನ್ ಗೆ ತಾಲೂಕು ಕಚೇರಿ ಮುಂಭಾಗದಲ್ಲಿ ರಸ್ತೆ ಮಾಡದ ನಗರ ಪಂಚಾಯತ್
ಜಿಲ್ಲಾ ಜನತಾ ದರ್ಶನದಲ್ಲಿ ಉಸ್ತುವಾರಿ ಸಚಿವರಿಗೆ ಮನವಿ















ಸುಳ್ಯ ತಾಲೂಕು ಕಚೇರಿ ಹಿಂಭಾಗದಲ್ಲಿ ಇರುವ ಇಂದಿರಾ ಕ್ಯಾಂಟೀನ್ ಗೆ ತಾಲೂಕು ಕಚೇರಿ ಮುಂಭಾಗದಲ್ಲಿ ದಾರಿ ವ್ಯವಸ್ಥೆ ಇಲ್ಲದೆ ಸುಳ್ಯದಲ್ಲಿ ಇಂದಿರಾ ಕ್ಯಾಂಟೀನ್ ಇದೆ ಎಂಬುದೇ ಜನತೆಗೆ ತಿಳಿಯದೆ ಹೋಗಿದೆ ಇದರ ಬಗ್ಗೆ ಸುಳ್ಯದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದಾಗ ದಾರಿ ವ್ಯವಸ್ಥೆ ಮಾಡುವಂತೆ ನಗರ ಪಂಚಾಯತ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅದರೆ ಅದು ಕಾರ್ಯರೂಪಕ್ಕೆ ಬಾರದೇ ಇದ್ದುದರಿಂದ ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮತ್ತು ಪೆರುವಾಜೆ ಗ್ರಾಮದ ಮುರ್ಕೆತ್ತಿ ವಾರ್ಡ್ ದುರ್ಗಾ ನಗರದಲ್ಲಿ ಹಲವಾರು ವರ್ಷಗಳಿಂದ ವಾಸಮಾಡಿಕೊಂಡು ಬರುತ್ತಿರುವ 17 ಪರಿಶಿಷ್ಟ ಜಾತಿಯ ಕುಟುಂಬಗಳು 50-53 ಯಲ್ಲಿ ಅಕ್ರಮ ಸಕ್ರಮ ಕ್ಕೆ ಅರ್ಜಿ ಸಲ್ಲಿಸಿದ್ರು ಇಲ್ಲಿಯವರೆಗೂ ಯಾವುದೇ ಪರಿಶೀಲನೆ ಆಗಿಲ್ಲ ಇದರ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿ ಪ್ರಯೋಜನ ಆಗದೇ ಇರುವುದರಿಂದ ಇಂದು ಬಂಟ್ವಾಳ ದಲ್ಲಿ ನಡೆದ ಜಿಲ್ಲಾ ಜನತಾ ದರ್ಶನ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರ ಗಮನಕ್ಕೆ ತಂದಾಗ ಇದರ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವಂತೆ ಸುಳ್ಯ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದಾರೆ ಎಂದು ಪೆರುವಾಜೆ ಗ್ರಾಮ ಪಂಚಾಯಿತಿ ಸದಸ್ಯ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.










