ಚೂಂತಾರು ಉಪಾಸನಕ್ಕೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಆಗಮನ – ಪಾದಪೂಜೆ

0

ಗೋಕರ್ಣ ಮಂಡಲಾಧೀಶ್ವರ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ‌ ಮಹಾಸ್ವಾಮಿಯವರು ಜ. 24ರಂದು ಚೊಕ್ಕಾಡಿ ಶ್ರೀರಾಮ ದೇವಾಲಯದ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಚೂಂತಾರು ಮಹೇಶ್ ಭಟ್ಟರ ಮನೆ ಉಪಾಸನಾ ಗೆ ಆಗಮಿಸಿದರು. ಜ. 25ರಂದು ಭಜನೆ, ಕುಂಕುಮಾರ್ಚನೆ ನಡೆಯಿತು.

ಜ. 26ರಂದು ಗುರುಪಾದುಕಾ ಪೂಜೆಯೊಂದಿಗೆ ಶ್ರೀಕರಾರ್ಚಿತ ಶ್ರೀ ಸೀತಾರಾಮಚಂದ್ರ ಚಂದ್ರಮೌಳೀಶ್ವರ ರಾಜರಾಜೇಶ್ವರಿ ದೇವತಾ ಪೂಜೆ ಮತ್ತು ಶ್ರೀಗುರುಬಿಕ್ಷಾ ಸೇವೆಗಳು ನಡೆಯಿತು. ಮಹೇಶ್ ಭಟ್ ಚೂಂತಾರು ಮತ್ತು ಅವರ ಕುಟುಂಬಸ್ಥರು, ಬಂಧು ಮಿತ್ರರು, ಶ್ರೀ ಗುರುಗಳ ಭಕ್ತವೃಂದದವರು ಆಗಮಿಸಿ ಗುರುಗಳ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು.