ಇತ್ತೀಚೆಗೆ ಹಿದಾಯ ಫೌಂಡೇಶನ್ ಮತ್ತು ಮುಸ್ಲಿಂ ಯೂತ್ ಫೆಡರೇಶನ್ ವತಿಯಿಂದ ಆಯೋಜಿಸಲಾದ ಉಚಿತ ಆರೋಗ್ಯ ಮೇಳ ದಲ್ಲಿ ಕಣ್ಣಿನ ತಪಾಸಣೆ ಯಲ್ಲಿ ಗುರುತಿಸಲಾದ 126 ಫಲಾನುಭವಿಗಳಿಗೆ ಸುಮಾರು ರೂ 1.25 ಲಕ್ಷ ಮೌಲ್ಯದ ಉಚಿತ ಕನ್ನಡಕ ವಿತರಣಾ ಸಮಾರಂಭ ಸುಳ್ಯ ಅನ್ಸಾರ್ ಗೋಲ್ಡನ್ ಜುಬಿಲಿ ಸಭಾಂಗಣ ದಲ್ಲಿ ಆಯೋಜಿಸಲಾತು .
ಅಧ್ಯಕ್ಷತೆಯನ್ನು ಮುಸ್ಲಿಂ ಯೂತ್ ಫೆಡರೇಶನ್ ಅಧ್ಯಕ್ಷ ನಗರ ಪಂಚಾಯತ್ ಸದಸ್ಯ ಕೆ. ಎಸ್. ಉಮ್ಮರ್ ವಹಿಸಿದ್ದರು .















ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಉದ್ಘಾಟಸಿದರು
ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆ ಎಂ. ಮಹಮ್ಮದ್ ಕೆಎಂಎಸ್, ಅನ್ಸಾರ್ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ಲ ಕಟ್ಟೆಕ್ಕಾರ್ಸ್,ಎಪಿಎಂಸಿ ಮಾಜಿ ನಿರ್ದೇಶಕ ಅದo ಹಾಜಿ ಕಮ್ಮಾಡಿ, ಅಲ್ಪ ಸಂಖ್ಯಾತಸಹಕಾರಿ ಸಂಘ ದ ಅಧ್ಯಕ್ಷ ಇಕ್ಬಾಲ್ ಎಲಿ ಮಲೆ ಫಲಾನುಭವಿಗಳಿಗೆ ಕನ್ನಡಕ ವಿತರಿಸಿದರು .
ಅನ್ಸಾರ್ ನಿರ್ದೇಶಕ ಕೆ. ಬಿ. ಇಬ್ರಾಹಿಂ, ಯೂತ್ ಫೆಡರೇಶನ್ ಪದಾದಿಕಾರಿಗಳಾದ ಶರೀಫ್ ಕಂಠಿ, ಮುನಫರ್ ನಾವೂರು, ಇಕ್ಬಾಲ್ ಸುಣ್ಣ ಮೂಲೆ ಕನಕಮಜಲು, ರಶೀದ್ ಜಟ್ಟಿಪ್ಪಳ್ಳ, ಉನೈಸ್ ಪೆರಾಜೆ,ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್ ಬಾ ಗವಹಿಸಿದ್ದರು ಕನ್ನಡಕವನ್ನು ಹಿದಾಯ ಫೌಂಡೇಶನ್ ಮಂಗಳೂರು ಸಂಸ್ಥೆಯು ಪ್ರಾಯೋಜಿಸಲಾಗಿತ್ತು










